ಗದ್ದೆಗಳಿಂದ ಮರಗಳನ್ನು ತೆರವುಗೊಳಿಸದಿದಲ್ಲಿ ಧರಣಿ : ವೀಣಾಅಚ್ಚಯ್ಯ ಎಚ್ಚರಿಕೆ

23/05/2020

ಮಡಿಕೇರಿ ಮೇ 23 : ರೈತರ ಗದ್ದೆಗಳಲ್ಲಿ ಅತಿವೃಷ್ಟಿಯಿಂದ ಶೇಖರಣೆಗೊಂಡಿರುವ ಮರಗಳು ಮತ್ತು ಮರಳನ್ನು ಶೀಘ್ರ ತೆರವುಗೊಳಿಸದಿದಲ್ಲಿ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಎಚ್ಚರಿಕೆ ನೀಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಹಟ್ಟಿಹೊಳೆ, ಹಮ್ಮಿಯಾಲ ಭಾಗದಲ್ಲಿ ಗದ್ದೆಗಳಲ್ಲಿ ಮರಗಳು ಹೂತು ಹೋಗಿದ್ದು, ಈ ಮರಗಳನ್ನು ತೆರವುಗೊಳಿಸಬೇಕೆಂದು ಹಲವು ಬಾರಿ ಹೇಳಿದ್ದರೂ ಸ್ಪಂದನೆ ದೊರೆತ್ತಿಲ್ಲವೆಂದು ಆರೋಪಿಸಿದ್ದಾರೆ.