ಗುತ್ತಿಗೆದಾರರ ಬಿಲ್ ಪಾಸಾಗದೆ ವಾಪಾಸ್ಸಾದ ಹಣ ಎಷ್ಟು ಗೊತ್ತಾ !

23/05/2020

ಮಡಿಕೇರಿ ಮೇ 23 : ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಪಂಚಾಯತ್ ರಾಜ್ ಇಲಾಖೆಯ ಅಂದಾಜು 1 ಕೋಟಿ, ಲೋಕೋಪಯೋಗಿ ಇಲಾಖೆಯ 13 ಕೋಟಿ ಮತ್ತು ಮಡಿಕೇರಿ ತಾಲ್ಲೂಕು ಪಂಚಾಯತ್ ನಿಂದ 1.9 ಕೋಟಿ ರೂ.ಗಳು ಸರ್ಕಾರಕ್ಕೆ ಹಿಂದಿರುಗಿದೆ ಎಂದು ಜಿಲ್ಲೆಯ ಗುತ್ತಿಗೆದಾರರ ಸಂಘದ ಪ್ರಮುಖ ರಾಜೀವ್ ಲೋಚನ ತಿಳಿಸಿದ್ದಾರೆ. ಖಜಾನೆಯ ಅಧಿಕಾರಿಗಳು ಯಾವುದೇ ಬಿಲ್ಲುಗಳನ್ನು ಸ್ವೀಕರಿಸದೆ ಇರುವುದರಿಂದ ಈ ಅಚಾತುರ್ಯ ನಡೆದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.