ಸಂಶಯಾಸ್ಪದ ಸಾವು ಆರೋಪ : ವಿರಾಜಪೇಟೆಯಲ್ಲಿ ಮಗುವಿನ ಶವ ಹೊರ ತೆಗೆದು ಪರೀಕ್ಷೆ

23/05/2020

ಮಡಿಕೇರಿ ಮೇ 23 : ಹೆರಿಗೆ ಸಂದರ್ಭ ಮಗು ಮೃತಪಟ್ಟಿದ್ದು, ಇದಕ್ಕೆ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣವೆಂದು ಆರೋಪ ಕೇಳಿ ಬಂದ ಹಿನ್ನೆಲೆ ಹೂಳಲಾಗಿದ್ದ ಮಗುವಿನ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳ ಪಡಿಸಿದ ಪ್ರಕರಣ ವಿರಾಜಪೇಟೆಯಲ್ಲಿ ನಡೆದಿದೆ.
ವಿರಾಜಪೇಟೆ ಪಟ್ಟಣದ ನಿವಾಸಿ ಫಯಾಜ್ ಎಂಬುವವರು ತಮ್ಮ ಗಂಡು ಶಿಶು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನ ಹೋರಾಟ ನಡೆಸುತ್ತಿದ್ದು, ಇಂದು ತಹಶೀಲ್ದಾರ್ ಸಮ್ಮುಖದಲ್ಲಿ ಮಗುವನ್ನು ಹೊರ ತೆಗೆಯಲಾಯಿತು.