ನೂತನ ಮನೆಗಳ ಕಾಮಗಾರಿ ಸಮರ್ಪಕವಾಗಿಲ್ಲ : ಸಂತ್ರಸ್ತರ ಅಳಲು

May 23, 2020

ಮಡಿಕೇರಿ ಮೇ 23 : ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ನಮಗೆ ನೂತನ ಮನೆಗಳನ್ನು ಗುರುತಿಸಿ ಸಂಖ್ಯೆಗಳನ್ನು ನೀಡಲಾಗಿದೆ. ಆದರೆ ಜಂಬೂರು ಗ್ರಾಮದಲ್ಲಿರುವ ಮನೆಗಳನ್ನು ಪರಿಶೀಲಿಸಿದಾಗ ಕಾಮಗಾರಿ ಸಮರ್ಪಕವಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಮಳೆಹಾನಿ ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಮನೆ ಅಲ್ಲಲ್ಲಿ ಬಿರುಕು ಬಿಟ್ಟಿದೆ, ಗೋಡೆ ವಾಲಿದಂತ್ತಿದೆ ಮತ್ತು ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲವೆಂದು ಆರೋಪಿಸಿದ್ದಾರೆ.

 

 

error: Content is protected !!