ಗಾಳಿಬೀಡು, ಬಿಳಿಗೇರಿ ಗ್ರಾಮದಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ

23/05/2020

ಮಡಿಕೇರಿ ಮೇ 23 : ಮಹಾಮಳೆಯಿಂದ ಮನೆ ಮತ್ತು ಆಸ್ತಿಗಳನ್ನು ಕಳೆದುಕೊಂಡ ಘಟನೆ ನಡೆದು ಎರಡೂವರೆ ವರ್ಷವೇ ಕಳೆದಿದ್ದರೂ ನೂತನ ಮನೆಯ ಭಾಗ್ಯ ಸಂತ್ರಸ್ತರಿಗೆ ಇನ್ನೂ ಕೂಡಿ ಬಂದಿಲ್ಲ. ಗಾಳಿಬೀಡು ಮತ್ತು ಬಿಳಿಗೇರಿಯಲ್ಲಿ ಸಂತ್ರಸ್ತರಿಗಾಗಿ ನಡೆಯುತ್ತಿರುವ ಮನೆಗಳ ನಿರ್ಮಾಣ ಕಾರ್ಯದ ಕಾಮಗಾರಿ ಪೂರ್ಣಗೊಳ್ಳಲು ಇನ್ನು ನಾಲ್ಕು ತಿಂಗಳಾದರು ಬೇಕಾಗುತ್ತದೆ ಎಂದು ಅಧಿಕಾರಿ ವರ್ಗ ಹೇಳಿದೆ. ಸುಮಾರು 250 ಮನೆಗಳ ನಿರ್ಮಾಣ ಕಾರ್ಯ ಆಗಬೇಕಾಗಿದೆ.