ಜಿಲ್ಲಾ ಕೋವಿಡ್ ಆಸ್ಪತ್ರೆ : ನೂರಕ್ಕೂ ಹೆಚ್ಚಿನ ಮಂದಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ

25/05/2020

ಮಡಿಕೇರಿ ಮೇ 24 : ಜಿಲ್ಲಾ ಕೇಂದ್ರ ಮಡಿಕೆÉೀರಿಯ ಕೋವಿಡ್-19 ಆಸ್ಪತ್ರೆಯಲ್ಲಿ 150 ರಿಂದ 160 ಹಾಸಿಗೆಗಳಿಗೆ ಏಕ ಕಾಲಕ್ಕೆ ಆಮ್ಲಜನಕವನ್ನು ಪೂರೈಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಒಟ್ಟು 44.95 ಲಕ್ಷ ರೂ.ಮೊತ್ತದ ಈ ಕೇಂದ್ರೀಕೃತ ಆಮ್ಲಜನಕ ಪೈಪ್ ಲೈನ್ ಯೋಜನೆಗೆ ವಿಪತ್ತು ನಿಧಿಯಿಂದ 40 ಲಕ್ಷ ಖರ್ಚು ಮಾಡಲಾಗಿದ್ದು, 4.95 ಲಕ್ಷ ರೂ.ಗಳನ್ನು ತಾಜ್ ವಿವಾಂತ ಸಂಸ್ಥೆ ಒದಗಿಸಿದೆ.
ಇದರೊಂದಿಗೆ ಕೋವಿಡ್ ಆಸ್ಪತೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 11 ವೆಂಟಿಲೇಟರ್‍ಗಳ ವ್ಯವಸ್ಥೆಯನ್ನು ಈಗಾಗಲೆ ಮಾಡಲಾಗಿದೆ.