ಈದ್ ಉಲ್ ಫಿತರ್ ಹಬ್ಬದ ಪ್ರಯುಕ್ತ ಯಡಪಾಲದಲ್ಲಿ ದಿನಸಿ ಕಿಟ್ ವಿತರಣೆ
25/05/2020

ಮಡಿಕೇರಿ ಮೇ 25 : ಯಡಪಾಲದ ಎಸ್ ಕೆ ಎಸ್ ಎಸ್ ಎಫ್ ಹಾಗೂ ಎಸ್ ವೈ ಎಸ್ ವತಿಯಿಂದ ಈದ್ ಉಲ್ ಫಿತರ್ ಹಬ್ಬದ ಪ್ರಯುಕ್ತ ಊರಿನ 145 ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ಮನೆ ಮನೆಗಳಿಗೆ ತೆರಳಿ ವಿತರಿಸಲಾಯಿತು.
ಕೆ. ಎo. ಮೊಯ್ದು ಫೈಝಿ ಅವರ ಪ್ರಾರ್ಥನೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಕಾರ್ಯದರ್ಶಿ ಅಬೂಬಕ್ಕರ್ ಮೌಲವಿ, ಉಪಾಧ್ಯಕ್ಷ ಕೆ ಯು ಈಸ, ಕೋಶಾಧಿಕಾರಿ ಕೆ ಎಮ್ ಹಮೀದ್, ಎಸ್ ಕೆ ಎಸ್ ಎಸ್ ಎಫ್ ಇದರ ಅಧ್ಯಕ್ಷರಾದ ಶಈದ್ ಫೈಜಿ, ಕಾರ್ಯದರ್ಶಿ ಹನೀಫ ಫೈಜಿ, ಕೋಶಾಧಿಕಾರಿ ರಫೀಕ್ ಕೆ ಪಿ, ಹಾರಿಸ್ ಬಾಖವಿ, ಸಿನಾನ್ ಎಸ್ ಎಸ್, ಹನೀಫಾ ಇನ್ನಿತರರು ಉಪಸ್ಥಿತರಿದ್ದರು.
ರಾತ್ರಿ ನಡೆದ ಆನ್ಲೈನ್ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಪ್ರೊಫೆಸರ್ ಅನೀಸ್ ಕೌಸರಿ ಹಾಗೂ ತಂಲೀಕ್ ದಾರಿಮಿ ಅಶಂಸ ಮಾತನಾಡಿದರು.
ಕೊನೆಯಲ್ಲಿ ವರ್ಕಿಂಗ್ ಸೆಕ್ರೆಟರಿ ಸಿನಾನ್ ಎಸ್ ಎಸ್ ವಂದನಾರ್ಪಣೆ ಮಾಡಿದರು.
