ಕರ್ನಾಟಕ ಮೂಲದ ಸ್ವಾಮೀಜಿ ಹತ್ಯೆ

25/05/2020

ನಾಂದೇಡ್ ಮೇ 24 : ಕರ್ನಾಟಕ ಮೂಲದ ಸ್ವಾಮೀಜಿಯೊಬ್ಬರು ಮಹಾರಾಷ್ಟ್ರದಲ್ಲಿ ಕಳ್ಳರಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ.
ಮಠದಲ್ಲಿ ಕಳ್ಳತನಕ್ಕೆ ಬಂದ ಕಳ್ಳರು ಪೀಠಾಧಿಪತಿಯ ಹತ್ಯೆಮಾಡಿನಂತರ ಮಠದಲ್ಲಿ ಕೆಲಸಮಾಡುತ್ತಿದ್ದ ಮತ್ತೋರ್ವ 50 ವ್ಯಕ್ತಿಯನ್ನ ಸಹ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹತ್ತೆಯಾದ ಶ್ರೀಗಳು ಗಣಿನಾಡು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದೀಪುರ ಗ್ರಾಮದ ದೊಡ್ಡಬಸವೇಶ್ವರ ಮಠದ ಚರಂತಪ್ಪಜ್ಜನವರ ಮಗ ರುದ್ರಪಶುಪತಿ ಶಿವಾಚಾರ್ಯ ಶ್ರೀಗಳೇ ಹತ್ಯೆಗೀಡಾದ ಸ್ವಾಮೀಜಿಗಳು.
ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಉಮರಿ ತಾಲೂಕಿನ ನಾಗಠಾಣದ ನಿರ್ವಾಣಿ ಮಠದ ಪೀಠಾಧಿಯಾಗಿದ್ದ ಶ್ರೀಗಳು ಹಲವು ವರ್ಷಗಳಿಂದ ಅಲ್ಲೇ ವಾಸವಾಗಿದ್ರು, ನಾಗಠಾಣದ ನಿರ್ವಾಣಿ ಮಠ ಉಜ್ಜಯಿನಿ ಪೀಠದ ಶಾಖಾ ಮಠವಾಗಿದ್ದರಿಂದ ಮಹಾರಾಷ್ಟ್ರದಲ್ಲಿ ದೊಡ್ಡ ಭಕ್ತ ಸಮೂಹವನ್ನ ಹೊಂದಿದ್ರು ಶ್ರೀಗಳು, ನಿನ್ನೆ ತಡರಾತ್ರಿ ಬಂದ ಕಳ್ಳರ ಗುಂಪು ಶ್ರೀಗಳನ್ನ ಹತ್ಯೆಮಾಡಿ ನಂತರ ಮಠದಲ್ಲಿಕೆಲಸಮಾಡುತಿದ್ದ ಕೆಲಸಗಾರನನ್ನ ಸಹ ಕೊಲೆಮಾಡಿ ಪರಾರಿಯಾಗಿದ್ದಾರೆ.