ರಾಜ್ಯದ ಬೊಕ್ಕಸ ಚೇತರಿಸಿಕೊಳ್ಳುತ್ತಿದೆ

25/05/2020

ಬೆಂಗಳೂರು ಮೇ 24 : ಲಾಕ್‍ಡೌನ್ ಹಿನ್ನೆಲೆ ರಾಜ್ಯದ ಆರ್ಥಿಕ ಸಂಪನ್ಮೂಲ ಬಹುತೇಕ ಬರಿದಾಗಿತ್ತು. ಆದರೀಗ ಲಾಕ್‍ಡೌನ್ ಸಡಿಲಗೊಳಿಸಿ ದ ಪರಿಣಾಮ ನಿಧಾನವಾಗಿ ರಾಜ್ಯದ ಬೊಕ್ಕಸ ಚೇತರಿಸಿಕೊಳ್ಳುವತ್ತ ಸಾಗಿದೆ.
ಎರಡೂವರೆ ತಿಂಗಳ ಲಾಕ್‍ಡೌನ್ ನಿಂದಾಗಿ ರಾಜ್ಯದ ಬೊಕ್ಕಸ ಖಾಲಿ ಯಾಗಿತ್ತು.ಇದನ್ನು ಮನಗಂಡ ರಾಜ್ಯ ಸರ್ಕಾರ ಲಾಕ್‍ಡೌನ್ 3.ಔ ಘೋಷಣೆ ಯಾ ದಂದಿನಿಂದಲೇಹಂತಹಂತ ವಾಗಿ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ನೀಡಿತು.
ಪರಿಣಾಮ ಲಾಕ್‍ಡೌನ್ 4.0 ವೇಳೆ ರಾಜ್ಯ ಸರ್ಕಾರ ಬಹುತೇಕ ಚುಟುವಟಿಕೆಗಳಿಗೆ ನಿಯಮ ಸಡಿಲಿಕೆ ಮಾಡಿತು. 2020-21 ಆರ್ಥಿಕ ವರ್ಷದ ಮೊದಲ ತಿಂಗಳು ಏಪ್ರಿಲ್ ನಲ್ಲಿ ಲಾಕ್‍ಡೌನ್ ಎಫೆಕ್ಟ್ ನಿಂದ ರಾಜ್ಯದ ತೆರಿಗೆ ಮೂಲ ಖೋತ ಕಂಡು ಬಂದಿದ್ದು,ಏಪ್ರಿಲ್ ಅಂತ್ಯ ಹಾಗೂ ಮೇ ತಿಂಗಳ ಬಳಿಕ ನಿಯಮಾವಳಿ ಸಡಿಲಿಕೆ ಬಳಿಕ ರಾಜ್ಯದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಬರುವ ಆದಾಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಲ್ಲದಿದ್ದರೂ ನಿಧಾನಗತಿಯಲ್ಲಿ ಆರ್ಥಿಕ ಸಂಪನ್ಮೂಲ ಹರಿದು ಬರುತ್ತಿದೆ.