ಒಂದು ಲಕ್ಷ ಸೋಂಕು ಪತ್ತೆ ಪರೀಕ್ಷೆ

25/05/2020

ಬೆಂಗಳೂರು ಮೇ 24 : ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಪರೀಕ್ಷೆ ಪ್ರಮಾಣ ಎರಡು ಲಕ್ಷ ದಾಟಿದ್ದು, ಸೋಂಕು ಪತ್ತೆ ಮಾಡುವ ಪ್ರಕ್ರಿಯೆಯಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಕಳೆದ 16 ದಿನಗಳಲ್ಲಿ ಒಂದು ಲಕ್ಷ ಸೋಂಕು ಪತ್ತೆ ಪರೀಕ್ಷೆ ಮಾಡಿದ್ದು, ಈವರೆಗೆ 2.03 ಲಕ್ಷ ಪರೀಕ್ಷೆಗಳು ನಡೆದಿವೆ. ಸೋಂಕು ಪತ್ತೆ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇಂದಿಗೆ ರಾಜ್ಯದಲ್ಲಿ 2.03 ಲಕ್ಷ #ಅಔಗಿIಆ19 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಕಳೆದ16 ದಿನಗಳಲ್ಲಿ 1ಲಕ್ಷಕ್ಕೂ ಅಧಿಕ ಪರೀಕ್ಷೆ ನಡೆಸಲಾಗಿದೆ. ಈಗ ನಮ್ಮಲ್ಲಿ 57 ಕೋವಿಡ್ ಲ್ಯಾಬ್‍ಕಾರ್ಯನಿರ್ವಹಿಸುತ್ತಿವೆ. ಇದಕ್ಕಾಗಿ ನಮ್ಮ ಎಲ್ಲ ಅಧಿಕಾರಿಗಳು ವೈದ್ಯರು, ಲ್ಯಾಬ್ ಟೆಕ್ನಷಿಯನ್ಸ್ ಗಳ ನಿರಂತರ ಪರಿಶ್ರಮ ಗಳಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ಹೇಳಿದ್ದಾರೆ.