ಎಂಎಲ್‍ಸಿ ಆಗಲಿದ್ದಾರೆ ಹೆಚ್.ವಿಶ್ವನಾಥ್

25/05/2020

ಬೆಂಗಳೂರು ಮೇ 24 : ಮೇ ಮತ್ತು ಜೂನ್ ನಲ್ಲಿ 16 ವಿಧಾನ ಪರಿಷತ್ ಸದಸ್ಯರುಗಳ ಅವಧಿ ಮುಕ್ತಾಯಗೊಳ್ಳಲಿದ್ದು, ಬಿಜೆಪಿ ಸರ್ಕಾರಿ ಅಧಿಕಾರಕ್ಕೆ ಬರಲು ಕಾರಣವಾದ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಅವರುಗಳನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡುವ ಸಾಧ್ಯತೆಯಿದೆ.
ಮಾಜಿ ಎಂಎಲ್ ಸಿ ಗೋ.ಮಧುಸೂಧನ್, ನಿರ್ಮಲ್ ಕುಮಾರ್ ಸುರಾನಾ ಹಾಗೂ ಮತ್ತು ಸಿಪಿ ಯೋಗೇಶ್ವರ್ ಹಾಗೂ ಯಡಿಯೂರಪ್ಪ 2ನೇ ಪುತ್ರ ವಿಜಯೇಂದ್ರ ಕೂಡ ಆಕಾಂಕ್ಷಿಗಳಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಕಾಂಗ್ರೆಸ್ ತನ್ನ ಪಟ್ಟಿಯನ್ನು ಸಿದ್ದಪಡಿಸಲಿದೆ, ಅದರಂತೆ ಜೆಡಿಎಸ್ ಕೂಡ ಪಟ್ಟಿ ತಯಾರಿಸಲಿದೆ.
ತೆರವಾಗುವ 16 ಪರಿಷತ್ ಸದಸ್ಯರಲ್ಲಿ 5 ನಾಮ ನಿರ್ದೇಶಿತರು, 7 ಮಂದಿ ವಿಧಾನ ಸಭೆಯಿಂದ ಆಯ್ಕೆಯಾಗುವವರು ಹಾಗೂ ನಾಲ್ಕು ಮಂದಿ ಶಿಕ್ಷಕರ ಕ್ಷೇತ್ರ ನಾಲ್ಕು ಮಂದಿ ಪದವೀದರರ ಕ್ಷೇತ್ರದಿಂದ ಆಯ್ಕೆಯಾಗುವ ಸದಸ್ಯರಾಗಿದ್ದಾರೆ.
ಬಿಜೆಪಿ ಸೇರಿ ಸೋತಿರುವ ಎಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್ ಶಂಕರ್ ಅವರನ್ನು ನಾಮ ನಿರ್ದೇಶನಗೊಳಿಸುವ ಸಾಧ್ಯತೆಯಿದೆ. ಮಧು ಸೂಧನ್ಜೊತೆಗೆ ನಿರ್ಮಲ್ ಕುಮಾರ್ ಸುರಾನ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕ್ಯಾಂಪ್ ನಲ್ಲಿ ಗುರುತಿಸಿಕೊಂಡಿದ್ದಾರೆ.