ಯೋಧರ ಬಂಧನ : ಭಾರತ ತಿರಸ್ಕಾರ

May 25, 2020

ನವದೆಹಲಿ ಮೇ 24 : ಲಡಾಖ್ ನಲ್ಲಿ ಭಾರತ ಹಾಗೂ ಚೀನಾ ನಡುವೆ ಸಂಘರ್ಷ ತಾರಕಕ್ಕೇರಿರುವ ನಡುವಲ್ಲೇ ಭಾರತೀಯ ಯೋಧರನ್ನು ಚೀನಾ ಪಡೆಗಳು ಕಳೆದ ವಾರ ಬಂಧನಕ್ಕೊಳಪಡಿಸಿತ್ತು ಎಂಬ ವರದಿಯನ್ನು ಭಾರತೀಯ ಸೇನಾಪಡೆ ತಿರಸ್ಕರಿಸಿದೆ.
ಲಡಾಖ್’ನ ಪ್ಯಾಂಗ್ಯಾಂಗ್ ಸರೋವರದ ಬಳಿ ಹಲವು ದಿನಗಳಿಂದ ಬೀಡು ಬಿಟ್ಟಿರುವ ಚೀನಾ ಸೇನೆ, ಕಳೆದ ಬುಧವಾರ ಭಾರತದ ಗಡಿಯೊಳಗೆ ನುಗ್ಗಿ ಭಾರತದ ನೆಲದಲ್ಲಿ ಓಡಾಟ ನಡೆಸಿತ್ತು.
ಈ ವೇಳೆ ಭಾರತೀಯ ಯೋಧರು ಆಕ್ಷೇಪ ವ್ಯಕ್ತಪಡಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿದ್ದ ಚೀನಾ ಯೋಧರು ಭಾರತೀಯ ಯೋಧರನ್ನು ತಮ್ಮ ವಶಕ್ಕೆ ಪಡೆದಿದ್ದೂ ಅಲ್ಲದೆ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಬಳಿಕ ಮರಳಿಸಿದ್ದರು. ಈ ವಿಚಾರ ಕೈಮೀರುವ ಹಂತಕ್ಕೆ ತಲುಪುತ್ತಲೇ ಉಭಯ ದೇಶಗಳ ಕಮಾಂಡರ್ ಗಳು ಮಾತುಕತೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಿ, ಬಳಿಕ ಭಾರತೀಯ ಯೋಧರನ್ನು ಬಿಡುಗಡೆ ಮಾಡಲಾಗಿತ್ತು ಎಂದು ವರದಿಗಳಾಗಿದ್ದವು. ಈ ವರದಿಯನ್ನು ಇದೀಗ ಭಾರತೀಯ ಸೇನಾಪಡೆ ತಿರಸ್ಕರಿಸಿದೆ. ಚೀನಾ ಪಡೆಗಳಿಂದ ಯಾವುದೇ ಭಾರತೀಯ ಯೋಧರೂ ಬಂಧನಕ್ಕೊಳಪಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.

http://i.imgur.com/OXd4DCk.jpg

 

error: Content is protected !!