ಮನೆ ಮತ್ತು ವಾಹನಗಳ ಮೇಲೆ ಕಲ್ಲು ತೂರಾಟ : ದುಷ್ಕರ್ಮಿಗಳ ಪುಂಡಾಟಕ್ಕೆ ಬೆಚ್ಚಿಬಿದ್ದ ಸೋಮವಾರಪೇಟೆಯ ಮಹದೇಶ್ವರ ಬಡಾವಣೆ

25/05/2020

ಮಡಿಕೇರಿ ಮೇ 25 : ದುಷ್ಕರ್ಮಿಗಳು ಮಧ್ಯ ರಾತ್ರಿ ಸಮಯದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಮತ್ತು ಮನೆಗಳಿಗೆ ಕಲ್ಲು ತೂರಾಟ ನಡೆಸಿ ಪುಂಡಾಟ ಮೆರೆದಿರುವ ಘಟನೆ ಸೋಮವಾರಪೇಟೆಯ ಮಹದೇಶ್ವರ ಬಡಾವಣೆಯಲ್ಲಿ ನಡೆದಿದೆ.
ಕಫ್ರ್ಯೂ ಜಾರಿಯ ನಡುವೆಯೇ ಈ ಘಟನೆ ನಡೆದಿದ್ದು, ಹಲವಾರು ವಾಹನಗಳು ಹಾಗೂ ಮನೆಯ ಗಾಜುಗಳು ಪುಡಿ, ಪುಡಿಯಾಗಿದೆ. ಅಬ್ಕಾರಿ ಇಲಾಖೆಗೆ ಸೇರಿದ ಜೀಪಿಗೂ ಕಲ್ಲು ತೂರಲಾಗಿದೆ. ಶಬ್ಧ ಕೇಳಿದರೂ ಭಯದಿಂದ ಹೊರ ಬರಲು ಸಾಧ್ಯವಾಗಲಿಲ್ಲವೆಂದು ಬಡಾವಣೆಯ ನಿವಾಸಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಠಾಣಾಧಿಕಾರಿ ಶಿವಶಂಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಲ್ಲು ಎಸೆದು ದಾಂಧಲೆ ನಡೆಸಿದ ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸ್ ತಂಡ ಬಲೆ ಬೀಸಿದೆ.