ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ : ಡಿಕೆಶಿ ಪದಗ್ರಹಣ ಕುರಿತು ಚರ್ಚೆ

25/05/2020

ಮಡಿಕೇರಿ ಮೇ 25 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ಸಿದ್ಧತೆ ಮತ್ತು ಕೊರೋನಾ ವೈರಸ್ ಸ್ಥಿತಿಗತಿಗಳ ಬಗ್ಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಭೆ ನಡೆಯಿತು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ವಹಿಸಿದ್ದರು.
ಪಕ್ಷದ ಕೆಪಿಸಿಸಿ ವೀಕ್ಷಕರುಗಳಾದ ಹಾಗೂ ಕೋವಿಡ್ 19 ಟಾಸ್ಕ್‍ಪೋರ್ಸ್‍ನ ಜಿಲ್ಲಾ ಅಧ್ಯಕ್ಷರುಗಳಾದ ವಿಧಾನಸಭಾ ಸದಸ್ಯ ಆರ್.ಧರ್ಮಸೇನ, ಜಿಲ್ಲಾ ವೀಕ್ಷಕರಾದ ಮಂಜುಳ ರಾಜ್, ಮಡಿಕೇರಿ ವಿಧಾನಸಭಾ ವೀಕ್ಷಕ ವೆಂಕಪ್ಪ ಗೌಡ, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವೀಕ್ಷಕ ಟಿ.ಎಂ.ಶಾಹಿದ್, ವಿಧಾನಸಭಾ ಸದಸ್ಯರಾದ ವೀಣಾಅಚ್ಚಯ್ಯ, ಪ್ರಮುಖರಾದ ಟಿ.ಪಿ.ರಮೇಶ್, ತಾರಾ ಅಯ್ಯಮ್ಮ, ಎಸ್.ಸಿ.ಘಟಕದ ಸಂಚಾಲಕ ಕಾಳಯ್ಯ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಒಂದು, ನಗರಸಭೆಯ ವಾರ್ಡ್‍ಗಳಲ್ಲಿ ಮೂರು, ಪ.ಪಂ. ವಾರ್ಡ್‍ಗಳಲ್ಲಿ ತಲಾ ಒಂದು ಕಡೆ ಕಡ್ಡಾಯವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲು ನಿರ್ಧಾರ ಕೈಗೊಳ್ಳಲಾಯಿತು.
ಅಲ್ಲದೇ ಈ ಕಾರ್ಯಕ್ರಮದ ಬಗ್ಗೆ ವಿಡಿಯೋ ಕಾನ್ಫರೆನ್ಸ್ ನಡೆಸುವಂತೆ ಸಲಹೆ ನೀಡಿದರು. ಇದೇ ಸಂದರ್ಭ ಕೆಪಿಸಿಸಿ ವೀಕ್ಷಕರುಗಳನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಕಾಂಗ್ರೆಸ್ ವಕ್ತಾರ ಟಿ.ಇ.ಸುರೇಶ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಕೆ.ಇ.ಇಸ್ಮಾಯಿಲ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ರಂಜಿ ಪೂಣಚ್ಚ, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ.ಯಾಕುಬ್, ಮಹಿಳಾ ಘಕಟದ ಅಧ್ಯಕ್ಷರಾದ ಸುರಯ್ಯ ಅಬ್ರಾರ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಎಂ.ಎ.ಉಸ್ಮಾನ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಮೈನಾ, ಪ್ರಮುಖರಾದ ಮಿಟ್ಟುಚಂಗಪ್ಪ, ಬಿ.ಬಿ.ಸತೀಶ್ ಕುಮಾರ್, ರಾಘವೇಂದ್ರ, ಅನಂತಕುಮಾರ್, ಜನಾರ್ಧನ, ಸತೀಶ್ ಕುಮಾರ್, ಪಿ.ವಿ.ಜಾನ್ಸನ್, ತ್ರಿಣೇಶ್, ಸರ ಚಂಗಪ್ಪ, ಎನ್.ಎಂ.ಉಮೇಶ್, ಪ್ರೇಮ ಕೃಷ್ಣಪ್ಪ, ಕಾವೇರಮ್ಮ ಸೋಮಣ್ಣ ಹಾಗೂ ಡಿಸಿಸಿ ಪದಾಧಿಕಾರಿಗಳು ಹಾಜರಿದ್ದರು.
ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಸೋಮವಾರಪೇಟೆ, ಕುಶಾಲನಗರ, ಮಡಿಕೇರಿ ಬ್ಲಾಕ್ ಅಧ್ಯಕ್ಷರುಗಳು ಮತ್ತು ಪಕ್ಷದ ಪದಾಧಿಕಾರಿಗಳು ಕಾರ್ಯಕ್ರಮದ ಕುರಿತು ವಿವರಿಸಿದರು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ಸ್ವಾಗತಿಸಿದರು, ಸಾಮಾಜಿಕ ಜಾಲತಾಣದ ಸೂರಜ್ ಹೊಸೂರು ನಿರೂಪಿಸಿದರು. ಡಿಸಿಸಿ ವಕ್ತಾರ ಟಾಟು ಮೊಣ್ಣಪ್ಪ ವಂದಿಸಿದರು.