ಶ್ರೀಮಂಗಲದಲ್ಲಿ ಜನಜಾಗೃತಿಯ ಪೋಸ್ಟರ್ ಅನಾವರಣ

May 25, 2020

ಗೋಣಿಕೊಪ್ಪಲು ಮೇ 25 : ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಇಂದು ಶ್ರೀಮಂಗಲದಲ್ಲಿ ಜನಜಾಗೃತಿಯ ಪೋಸ್ಟರನ್ನು ಅನಾವರಣಗೊಳಿಸಲಾಯಿತು.  ಸಾರ್ವಜನಿಕ ಸ್ಥಳವನ್ನು ಶುಚಿಯಾಗಿಡುವ ನಿಟ್ಟಿನಲ್ಲಿ ಅಲ್ಲಲ್ಲಿ ಉಗುಳದಂತೆ, ಮಾಸ್ಕ್ ಕಡ್ಡಾಯದ ಬಗ್ಗೆ ಮತ್ತು ಉಲ್ಲಂಘಿಸಿದಲ್ಲಿ ತೆರಬೇಕಾದ ದಂಡದ ಬಗ್ಗೆ ಇದರಲ್ಲಿ ಮಾಹಿತಿಯನ್ನು ನೀಡಲಾಗಿದ್ದು ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಮಾಣಿರ ಮುತ್ತಪ್ಪ   ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮಂಗಲ ಗ್ರಾಮ ಪಂಚಾಯತಿ ಸದಸ್ಯ ಸಿ. ಜೆ.ಕಾಳಯ್ಯ ಉಪಸ್ಥಿತರಿದ್ದರು. ಶ್ರೀಮಂಗಲದ ಪ್ರಮುಖ ಸ್ಥಳಗಳಲ್ಲಿ ಮತ್ತು ಬಸ್ ನಿಲ್ದಾಣದಲ್ಲಿ ಮಾಹಿತಿ ಪ್ರಚಾರ ಫಲಕವನ್ನು ಪ್ರಚುರಪಡಿಸಲಾಯಿತು.