ಸೋಮವಾರಪೇಟೆಯ ವಿವಿಧೆಡೆ ಈದ್ ಉಲ್ ಫಿತ್ರ್ ಅರ್ಥಪೂರ್ಣ ಆಚರಣೆ

25/05/2020

ಸೋಮವಾರಪೇಟೆ ಮೇ 25 : ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಮನೆಯಲ್ಲಿಯೇ ಈದ್ ಉಲ್ ಫಿತ್ರ್ ಹಬ್ಬವನ್ನು ಭಾನುವಾರ ಮತ್ತು ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಸೋಮವಾರಪೇಟೆ ಪಟ್ಟಣ, ಕಲ್ಕಂದೂರು, ಬಜೆಗುಂಡಿ, ಹೊಸತೋಟ, ಕಾಗಡಿಕಟ್ಟೆ ಸೇರಿದಂತೆ ಕೆಲವೆಡೆಗಳಲ್ಲಿ ಮಾತ್ರ ಹೆಚ್ಚಾಗಿರುವ ಮತಬಾಂಧವರು, ಹಬ್ಬವನ್ನು ಸಡಗರದದದಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಎಸ್.ಎಸ್.ಎಫ್ ನ ಹೊಸತೋಟ ಗ್ರಾಮದ ಶಾಖೆ ವತಿಯಿಂದ ಜನಾಂಗದ ಬಡ ಕುಟುಂಬಕ್ಕೆ ಪಡಿತರ ಕಿಟ್‍ಗಳನ್ನು ವಿತರಿಸಿದರು. ಈ ಸಂದರ್ಭ ಅಧ್ಯಕ್ಷ ಜಲೀಲ್, ಕಾರ್ಯದರ್ಶಿ ಆಸೀಫ್, ಖಜಾಂಚಿ ಹುಸೈನ್ ಸೇರಿದಂತೆ ಹಲವರು ಇದ್ದರು.
25ಎಸ್‍ಪಿಟಿ3: ಸೋಮವಾರಪೇಟೆ ಗಾಂಧಿನಗರದಲ್ಲಿ ರಫೀಖ್ ಎಂಬುವವರ ಮನೆಯಲ್ಲಿ ಹಬ್ಬದಾಚರಣೆ ಸಂದರ್ಭ ಮಕ್ಕಳು ಶುಭಾಶಯ ವಿನಿಮಯ ಮಾಡಿಕೊಂಡರು.