5 ಸಾವಿರ ಸೈನಿಕರನ್ನು ನಿಯೋಜಿಸಿದ ಚೀನಾ

26/05/2020

ನವದೆಹಲಿ ಮೇ 25 : ವಾಸ್ತವಿಕ ನಿಯಂತ್ರಣ ರೇಖೆ ಲಡಾಖ್ ಸೆಕ್ಟರ್‍ನ ವಿವಿಧ ಪ್ರದೇಶಗಳಲ್ಲಿ ಚೀನಾ 5 ಸಾವಿರ ಸೈನಿಕರನ್ನು ನಿಯೋಜಿಸಿ ಉಪಟಳ ನೀಡುತ್ತಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ತಮ್ಮ ಬಲಕ್ಕೆ ಸರಿ ಹೊಂದುವಂತೆ ಸೈನಿಕ ಬಲವನ್ನು ಹೆಚ್ಚಿಸುತ್ತೇವೆ ಎಂದು ಹೇಳಿದೆ.
ಪೀಪಲ್ಸ್ ಲಿಬರೇಶನ್ ಟ್ರೂಪ್ಸ್ ನಮ್ಮ ಭೂಭಾಗದಲ್ಲಿ ಯಾವುದೇ ರೀತಿಯ ಅತಿಕ್ರಮಣ ನಡೆಸದಂತೆ ಮುಂಜಾಗೃತೆ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ. ಪ್ರಸ್ತುತ, ಚೀನಾ ತನ್ನ ಎಲ್‍ಎಸಿಯ ಬದಿಯಲ್ಲಿ ಭಾರೀ ಮಟ್ಟದಲ್ಲಿ ಸೈನೆಯನ್ನು ನಿಯೋಜಿಸಿದೆ. ತಿರುಗಿಸಿದೆ. ಚೀನಾ ಭಾರತೀಯ ಸೇನೆಯ 81 ಮತ್ತು 114 ಬ್ರಿಗೇಡ್‍ಗಳ ಅಡಿಯಲ್ಲಿರುವ ಪ್ರದೇಶಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತ ಅವರನ್ನು ಸಣ್ಣ ಸಣ್ಣ ತುಕಡಿಗಳನ್ನು ನಿಯೋಜಿಸಿದೆ.
ಇದೇ ವೇಳೆ ದೌಲತ್ ಬೇಗ್ ಓಲ್ಡಿ ಮತ್ತು ಪಾಂಗೊಂಗ್ ತ್ಸೊ ಸರೋವರ ಬಳಿಯಲ್ಲಿ ಚೀನಿಯರು ಸೈನಿಕರು ಭಾರೀ ವಾಹನಗಳಲ್ಲಿ ನಿಜವಾದ ನಿಯಂತ್ರಣ ರೇಖೆಯ ಉದ್ದಕ್ಕೂ ಚಲಿಸಿದ್ದಾರೆ ಮತ್ತು ಭಾರತೀಯ ಭೂಪ್ರದೇಶದಲ್ಲಿದ್ದಾರೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
ಗಾಲ್ವಾನ್ ನಲಾ ಪ್ರದೇಶದ ಭಾರತೀಯ ರಸ್ತೆ ಕೆಎಂ120 ರಿಂದ ಸುಮಾರು 10-15 ಕಿ.ಮೀ ದೂರದಲ್ಲಿ ಡೇರೆಗಳನ್ನು ಹಾಕಿದ್ದಾರೆ. ಮೂಲಗಳ ಪ್ರಕಾರ ಚೀನೀಯರು ರಸ್ತೆಗಳನ್ನು ನಿರ್ಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಭಾರತ ಆಕ್ಷೇಪವೆತ್ತಿದ್ದು ಇದಕ್ಕೆ ಚೀನಾ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿರುವುದಾಗಿ ವಾದಿಸಿದೆ.