ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆ

26/05/2020

ಬೆಂಗಳೂರು ಮೇ 25 : ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ರಣಕೇಕೆ ಮುಂದುವರೆದಿದ್ದು ಇಂದು ಸಹ ಹೊಸದಾಗಿ 93 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆಯಾಗಿದೆ.
ಉಡುಪಿ 32, ಕಲಬುರಗಿ 16, ಯಾದಗಿರಿ 15, ಬೆಂಗಳೂರು 8, ದಕ್ಷಿಣ ಕನ್ನಡ 4, ಧಾರವಾಡ 4, ಬಳ್ಳಾರಿ 3, ಮಂಡ್ಯ 2, ಕೋಲಾರ 2, ಹಾಸನ, ತುಮಕೂರು, ಬೆಳಗಾವಿ, ವಿಜಯಪುರ, ಉತ್ತರಕನ್ನಡ, ರಾಮನಗರದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ.
ರಾಜ್ಯದಲ್ಲಿ ಇಂದು ಹೊಸದಾಗಿ 93 ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 55 ವರ್ಷದ ನಿವಾಸಿ ಭಾನುವಾರ ರಾತ್ರಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 43 ವರ್ಷದ ನಿವಾಸಿ ಮೇ 23ರಂದು ಮೃತಪಟ್ಟಿದ್ದರು. ಅವರಿಗೆ ಕೊರೋನಾ ಸೋಂಕು ತಗುಲಿತ್ತು ಎಂದು ಸೋಮವಾರ ಬಿಡುಗಡೆಯಾದ ವರದಿಯಲ್ಲಿ ದೃಢಪಟ್ಟಿತ್ತು.