ಶೋಭಾ ಹೆಸರಲ್ಲಿ ನಕಲಿ ಟ್ವೀಟ್

26/05/2020

ಉಡುಪಿ ಮೇ 25 : ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಮತ್ತು ಸಮಾಜದಲ್ಲಿ ಸಾಮಾಜಿಕ ಶಾಂತಿ ಭಂಗಗೊಳಿಸುವ ಉದ್ದೇಶದಿಂದ ದುಷ್ಕರ್ಮಿಗಳು ಅವರ ಹೆಸರಲ್ಲಿ ನಕಲಿ ಟ್ವೀಟ್‍ಗಳನ್ನು ಹರಡುತ್ತಿದ್ದಾರೆ ಎಂದು ಶೋಭಾ ಅವರು ಆರೋಪಿಸ್ದ್ದಾರೆ. ಅಲ್ಲದೆ ಈ ಕುರಿತಂತೆ ಪ್ರಕರಣದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಒತ್ತಾಯಿಸಿದ್ದಾರೆ.
ಕಲ್ಲಡ್ಕದ ನಿಶಾಂತ್ ಎಂಬ ಯುವಕನ ಸಾವಿಗೆ ಸಂಬಂಧಿಸಿದ ತನ್ನ ಟ್ವೀಟ್ ಬಗ್ಗೆ ಪ್ರತಿಕ್ರಯಿಸಿರುವ ಸಂಸದೆ ಶೋಬಾ ಟ್ವೀಟ್ ಸುದ್ದಿ ನಕಲಿ ಎಂದು ಹೇಳಿದ್ದಾರೆ.
ಮೇ 24 ರ ಭಾನುವಾರ, ನಿಶಾಂತ್ ಪಾಣಿಮಂಗಳೂರಿನಲ್ಲಿ ನದಿಗೆ ಹಾರಿ ಆತ್ಮಹತ್ಯೆ ಂಆಡಿಕೊಂಡಿದ್ದಾರೆ ಆ ವೇಳೆ ಸ್ಥಳದಲ್ಲಿದ್ದ ನಾಲ್ವರು ಮುಸ್ಲಿಂ ಯುವಕರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲ ನೀಡದೆ ಆತ ಸಾವನ್ನಪ್ಪಿದ್ದಾನೆ.