ಸಾಲಬಾದೆ : ರೈತ ನೇಣು ಬಿಗಿದು ಆತ್ಮಹತ್ಯೆ : ಸಂಪಿಗೆ ದಾಳು ಗ್ರಾಮದಲ್ಲಿ ಘಟನೆ

26/05/2020

ಮಡಿಕೇರಿ ಮೇ 26 : ಶನಿವಾರಸಂತೆ ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಿಗೆ ದಾಳು ಗ್ರಾಮದ ರೈತ ನಾಗೇಶ್ (48) ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಕುಟುಂಬಸ್ಥರು ದೂರಿದ್ದಾರೆ.
ಸಂಪಿಗೆದಾಳು ಗ್ರಾಮದ ಆಶಾ ಕಾರ್ಯಕರ್ತೆ ನೇತ್ರಾ ಎಂಬಾಕೆಯ ಪತಿ ನಾಗೇಶ್, ಗ್ರಾಮದಲ್ಲಿ ಮದುವೆ ಹಸೆ ಶಾಸ್ತ್ರಕ್ಕೆ ತೆರಳಿ ಊಟ ಮುಗಿಸಿ ಬಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬ್ಯಾಂಕಿನಲ್ಲಿ ಸಾಲ ಮಾಡಿದ್ದು, ಸಾಲದ ಬಾಧೆ ತಾಳಲಾರದೆ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇ ಗೌಡ, ಶನಿವಾರಸಂತೆ ಠಾಣಾಧಿಕಾರಿ ಕೃಷ್ಣ, ನಾಯಕ್ ಭೇಟಿ ನೀಡಿದ್ದು, ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಮೃತ ಪತ್ನಿಮ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.