ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಹಲವು ಕಡೆಗಳಿಗೆ ಬಸ್ ಸೌಕರ್ಯ : ಪುತ್ತೂರು ವಿಭಾಗೀಯ ನಿಯಂತ್ರಕ ನಾಗೇಂದ್ರ ಮಾಹಿತಿ

ಮಡಿಕೇರಿ ಮೇ.26 : ವಿನಾಯಿತಿ ಬಸ್ ಪಾಸ್ ಹೊಂದಿರುವ ವಿಕಲಚೇತನರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೀಡಿರುವ ಗುರುತಿನ ಚೀಟಿ ಮತ್ತು ಪಾಸ್ ಹೊಂದಿದ್ದರೆ ಬಸ್‍ನಲ್ಲಿ ಪ್ರಯಾಣಿಸಬಹುದಾಗಿದೆ ಎಂದು ಪುತ್ತೂರು ವಿಭಾಗೀಯ ನಿಯಂತ್ರಕರಾದ ನಾಗೇಂದ್ರ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಡಳಿತ ವತಿಯಿಂದ ಕೆಎಸ್‍ಆರ್‍ಟಿಸಿಗೆ ಸಂಬಂಧಿಸಿದಂತೆ ನಡೆದ ಫೆÇೀನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೂರ್ನಾಡಿನಿಂದ ವ್ಯಕ್ತಿಯೊಬ್ಬರು ಕರೆ ಮಾಡಿ ವಿಶೇಷ ಚೇತನರಿಗೆ ನೀಡುವ ಬಸ್ ಪಾಸ್ ಜೊತೆ ಯಾವ ದಾಖಲಾತಿಯನ್ನು ನೀಡಿ ಕೆಎಸ್‍ಆರ್‍ಟಿಸಿ ಬಸ್ ನಲ್ಲಿ ಸಂಚರಿಸಬಹುದು ಎಂದು ಪ್ರಶ್ನೆಗೆ ವಿಭಾಗೀಯ ನಿಯಂತ್ರಕರಿಂದ ಅವರು ಮಾಹಿತಿ ನೀಡಿದರು.
ನಗರದ ದೇಚೂರಿನಿಂದ ಮಹಿಳೆಯೊಬ್ಬರು ಕರೆ ಮಾಡಿ ವಿರಾಜಪೇಟೆ ವರೆಗೆ ಕೆಎಸ್‍ಆರ್‍ಟಿಸಿ ಬಸ್ ಸೇವೆ ಕಲ್ಪಿಸಲಾಗಿದ್ದು, ಈ ಬಸ್ ಸಂಚಾರವನ್ನು ಗೋಣಿಕೊಪ್ಪವರೆಗೂ ವಿಸ್ತರಿಸಬೇಕು. ಜೊತೆಗೆ ನಾಪೆÇೀಕ್ಲು ಭಾಗಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕದ ವ್ಯವಸ್ಥಾಪಕರಾದ ಎಚ್.ಗೀತಾ ಅವರು ಮಾತನಾಡಿ, ಈಗಾಗಲೇ ಗೋಣಿಕೊಪ್ಪ ಭಾಗಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ನಾಪೋಕ್ಲು ಭಾಗಕ್ಕೂ ಕೆಎಸ್‍ಆರ್‍ಟಿಸಿ ಬಸ್ಸುಗಳು ಸಂಚರಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು. ಸಮಯದ ಬದಲಾವಣೆಗಳಿದ್ದರೆ ಮಾಹಿತಿ ನೀಡಬಹುದಾಗಿದೆ ಎಂದರು.
ವಿಭಾಗೀಯ ನಿಯಂತ್ರಕರಾದ ನಾಗೇಂದ್ರ ಅವರು ಲಾಕ್‍ಡೌನ್ ನಿಯಮಾವಳಿಗಳಂತೆ ಬಸ್ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ನಿರ್ಧಾರದ ಬಸ್ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.
ಟಿ.ಶೆಟ್ಟಿಗೇರಿಯಿಂದ ವ್ಯಕ್ತಿಯೊಬ್ಬರು ಕರೆ ಮಾಡಿ. ನಮ್ಮ ಭಾಗಕ್ಕೆ ಖಾಸಗಿ ವಾಹನ ಸಂಚಾರ ಕಡಿಮೆ. ನಗರ-ಪಟ್ಟಣ ಭಾಗಕ್ಕೆ ತೆರಳಲು ವಾಹನಗಳು ಇರುವುದಿಲ್ಲ. ಆದ್ದರಿಂದ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.
ಸಹಾಯಕ ಸಂಚಾರ ನಿರೀಕ್ಷಕರಾದ ಹರೀಶ್ ಅವರು ಮಾತನಾಡಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮಕೈಗೊಂಡು ಸೂಕ್ತ ವ್ಯವಸ್ಥೆ ಮಾಡುವುದಾಗಿ ಅವರು ತಿಳಿಸಿದರು.
ಮೂರ್ನಾಡಿನಿಂದ ವ್ಯಕ್ತಿಯೊಬ್ಬರು ಕರೆ ಮಾಡಿ, ಮಡಿಕೇರಿಯಿಂದ ಕುಂಬಳದಾಳು ಮಾರ್ಗ ನಾಪೆÇೀಕ್ಲುವಿಗೆ ಮೊದಲು ಬಸ್ ಸಂಚಾರವಿತ್ತು, ರಸ್ತೆ ಸಮಸ್ಯೆಯಿಂದ ಇದೀಗ ಬಸ್ ಸಂಚಾರವಿಲ್ಲದಂತಾಗಿದೆ. ಬೇರೆ ಮಾರ್ಗದ ಮುಖಾಂತರ ಬಸ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.
ಈ ಬಗ್ಗೆ ಮಾತನಾಡಿದ ಸಹಾಯಕ ಸಂಚಾರ ನಿಯಂತ್ರಕರಾದ ಬಿ.ಎಚ್.ಹರೀಶ್ ಅವರು ಮಾತನಾಡಿ ನಾಪೋಕ್ಲು ಭಾಗಕ್ಕೆ ಈಗಾಗಲೇ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ತಿಳಿಸಿದರು.
ಕುಶಾಲನಗರದಿಂದ ವ್ಯಕ್ತಿಯೊಬ್ಬರು ಕರೆ ಮಾಡಿ, ಮಡಿಕೇರಿ ವಿಭಾಗಕ್ಕೆ ಈಗಾಗಲೇ ಜಾಗ ಮಂಜೂರಾಗಿದ್ದರೂ ಸಹ ಇನ್ನೂ ಕಾಮಗಾರಿ ಆರಂಭವಾಗಿಲ್ಲ ಎಂಬ ಬಗ್ಗೆ ಮಾಹಿತಿ ಕೇಳಿದರು.
ಪುತ್ತೂರು ವಿಭಾಗೀಯ ನಿಯಂತ್ರಕರಾದ ನಾಗೇಂದ್ರ ಅವರು ಮಾತನಾಡಿ, ಈಗಾಗಲೆ ಜಾಗ ಮಂಜೂರಾಗಿದ್ದರೂ ಸಹ ಇನ್ನುಳಿದ ಪ್ರಕ್ರಿಯೆಗಳು ಸರ್ಕಾರದ ಹಂತವಾಗಿದ್ದು. ನಿಯಮಾನುಸಾರ ಸರ್ಕಾರದಿಂದ ಮಾರ್ಗದರ್ಶನ ಬಂದ ಕೂಡಲೇ ಕಾಮಗಾರಿ ಆರಂಭವಾಗುವುದು ಎಂದು ಅವರು ತಿಳಿಸಿದರು.
ಬಸ್‍ನಲ್ಲಿ ಸಂಚರಿಸುವಾಗ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. 30 ಜನರಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸರ್ಕಾರದ ನಿಯಮದಂತೆ ಕರೆದೊಯ್ಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಸ್ ಚಾಲಕರು ಮತ್ತು ನಿರ್ವಾಹಕರೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ವಿಭಾಗೀಯ ನಿಯಂತ್ರಕರಾದ ನಾಗೇಂದ್ರ ಮತ್ತು ಕೆಎಸ್‍ಆರ್‍ಟಿಸಿ ಘಟಕದ ವ್ಯವಸ್ಥಾಪಕರಾದ ಎಚ್.ಗೀತಾ ಅವರು ಮನವಿ ಮಾಡಿದರು.
ಜೊತೆಗೆ ಜಿಲ್ಲೆಯಿಂದ ಮೈಸೂರಿಗೆ 5, ಬೆಂಗಳೂರಿಗೆ 6-8 ಬಸ್‍ಗಳು ಸರ್ಕಾರ ನಿಗದಿ ಪಡಿಸಿರುವ ಸಮಯದ ನಡುವೆ ಸಂಚರಿಸಲಿದೆ. ಬೆಳಗ್ಗೆ 7 ರಿಂದ 12ಯ ವರೆಗೆ ಬೆಂಗಳೂರಿಗೂ ಸಹ ಬಸ್ಸುಗಳು ಸಂಚರಿಸುತ್ತಿವೆ ಎಂದು ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕದ ವ್ಯವಸ್ಥಾಪಕರಾದ ಎಚ್.ಗೀತಾ ಅವರು ಮಾಹಿತಿ ನೀಡಿದರು.
ಮೈಸೂರಿಗೆ ಸೋಮವಾರಪೇಟೆ ಮಾರ್ಗವಾಗಿ 1, ವೀರಾಜಪೇಟೆ ಮಾರ್ಗವಾಗಿ 2 ಬಸ್‍ಗಳು ಸಂಚರಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು. ಜೊತೆಗೆ ಮಂಗಳೂರಿಗೆ ತೆರಳುವವರಿಗಾಗಿ 1 ಬಸ್ ಮೀಸಲಿದ್ದು ಬೆಳಗ್ಗೆ 8 ಗಂಟೆಗೆ ಸಾಕಷ್ಟು ಪ್ರಯಾಣಿಕರಿದ್ದರೆ ಬಸ್ ಸಂಚರಿಸಲಿದೆ ಎಂದು ತಿಳಿಸಿದರು.
ಇನ್ನುಳಿದಂತೆ ಮಡಿಕೇರಿಯಿಂದ ಭಾಗಮಂಡಲ ಮೂಲಕ ಕರಿಕೆಗೆ ಸಂಜೆ 4.30 ಮಡಿಕೇರಿಯಿಂದ ಕೆಎಸ್‍ಆರ್‍ಟಿಸಿ ಬಸ್ ಸಂಚಾರವಿದೆ. ಅದೇ ಬಸ್ ಕರಿಕೆಯಲ್ಲಿ ತಂಗಲಿದ್ದು, ಮರುದಿನ ಬೆಳಗ್ಗೆ 7 ಗಂಟೆಗೆ ಕರಿಕೆ ಮೂಲಕ ಭಾಗಮಂಡಲದಿಂದ ಮಡಿಕೇರಿಗೆ 10.30 ಗಂಟೆಗೆ ಬಂದು ಸೇರಲಿದೆ ಎಂದು ತಿಳಿಸಿದರು.
ಮಡಿಕೇರಿಯಿಂದ ಕುಶಾಲನಗರಕ್ಕೆ ಪ್ರತೀ ಅರ್ಧ ಗಂಟೆಗೆ ಒಂದು ಕೆಎಸ್‍ಆರ್‍ಟಿಸಿ ಬಸ್ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯ ವರೆಗೆ ಸಂಚರಿಸುತ್ತಿದೆ. ಮಡಿಕೇರಿಯಿಂದ ವಿರಾಜಪೇಟೆಗೆ ಪ್ರತೀ 1 ಗಂಟೆಗೆ ಒಂದು ಬಸ್ ಇದೆ ಎಂದು ಅವರು ಮಾಹಿತಿ ನೀಡಿದರು. ನೋಡಲ್ ಅಧಿಕಾರಿ ಶ್ರೀನಿವಾಸ್ ಇತರರು ಇದ್ದರು.