ಹುಲಿದಾಳಿ : ಹಸುವಿನ ಮಾಲೀಕರಿಗೆ ಪರಿಹಾರ ವಿತರಣೆ

26/05/2020

ಮಡಿಕೇರಿ ಮೇ 26 : ಕೆಲ ದಿನಗಳ ಹಿಂದಷ್ಟೆ ದಕ್ಷಿಣ ಕೊಡಗಿನ ಬೆಳ್ಳೂರು ಗ್ರಾಮದಲ್ಲಿ ಹುಲಿ ದಾಳಿಯಿಂದ ಸಾವಿಗೀಡಾಗಿದ್ದ ಹಸುವಿನ ಮಾಲೀಕರಿಗೆ 10 ಸಾವಿರ ರೂ.ಗಳ ಪರಿಹಾರದ ಚೆಕ್‍ನ್ನು ಶಾಸಕ ಬೋಪಯ್ಯ ಅವರು ವಿತರಿಸಿದರು.
ಬೆಳ್ಳೂರು ಗ್ರಾಮದ ಕಳ್ಳೆಂಗಡ ದಿನೇಶ್ ಎಂಬವರಿಗೆ ಸೇರಿದ ಹಸು ಹುಲಿ ದಾಳಿಗೆ ಬಲಿಯಾಗಿತ್ತು, ಈ ಸಂದರ್ಭ ಗ್ರಾಮಸ್ಥರು ಅಗತ್ಯ ಪರಿಹಾರಕ್ಕೆ ಒತ್ತಾಯಿಸಿದ್ದರು. ಇಂದು ಶಾಸಕ ಬೋಪಯ್ಯ ಅವರು ದಿನೇಶ್ ಅವರಿಗೆ ವೀರಾಜಪೇಟೆಯ ತಮ್ಮ ಕಛೇರಿಯಲ್ಲಿ ಪರಿಹಾರದ ಚೆಕ್ ಹಸ್ತಾಂತರಿಸಿದರು.