ಜೂ.1 ರಿಂದ ಹೊಟೇಲ್ ಗಳು ಆರಂಭ !

27/05/2020

ಬೆಂಗಳೂರು ಮೇ 26 : ಲಾಕ್‍ಡೌನ್‍ನಿಂದಾಗಿ ಮುಚ್ಚಲ್ಪಟ್ಟಿದ್ದ ಮಾಲ್, ಹೋಟೆಲ್‍ಗಳು ಜೂನ್ ಒಂದರಿಂದ ತೆರೆಯುವ ಸಾಧ್ಯತೆ ಹೆಚ್ಚಾಗಿದೆ. ಇಂದು ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಅನುಮತಿ ನೀಡಿದ ಬೆನ್ನಲ್ಲೇ ಮಾಲ್ ಮತ್ತು ಹೋಟೆಲ್ ಗಳು ಎಂದಿನಂತೆ ವ್ಯಾಪಾರ ನಡೆಸಲು ಷರತ್ತು ವಿಧಿಸಿ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ.

ಜೂನ್ ಒಂದರಿಂದ ಶಾಪಿಂಗ್ ಮಾಲ್ ತೆರೆಯಲು ಅನುಮತಿ ಸಿಕ್ಕಿದರೂ ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ ಮಾತ್ರ ಮಾಲ್ ಓಪನ್ ಇರಲಿದೆ. 2 ಹಂತಗಳಲ್ಲಿ ಮಾಲ್ ಓಪನ್‍ಗೆ ಸಮ್ಮತಿ ಸಿಗಲಿದ್ದು, ಮೊದಲ ಹಂತದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ.