ಪತ್ನಿಯನ್ನು ಹೊಡೆದು ಕೊಂದ ಪತಿ ಪರಾರಿ : ನಾಪೋಕ್ಲು ಸಮೀಪದ ಕಿರುಂದಾಡು ಗ್ರಾಮದಲ್ಲಿ ಘಟನೆ

27/05/2020

ಮಡಿಕೇರಿ ಮೇ 27 : ನಾಪೋಕ್ಲು ಸಮೀಪದ ಕಿರುಂದಾಡು ಗ್ರಾಮದ ಅಪ್ಪನೆರವಂಡ ರಾಧಾಕೃಷ್ಣ ಎಂಬವರ ಮನೆಯಲ್ಲಿ ವಾಸವಾಗಿದ್ದ ಸಿದ್ದು ಹಾಗೂ ಪಿರಿಯಾಪಟ್ಟಣದ ರಾಣಿಗೇಟ್ ನಿವಾಸಿ ಪುಷ್ಪ (40) ಇವರುಗಳ ಮಧ್ಯೆ ಏರ್ಪಟ್ಟ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದೆ. ತನ್ನ ತಂದೆ ಸಿದ್ದು ದೊಣ್ಣೆಯಿಂದ ಹೊಡೆದು ತಾಯಿ ಪುಷ್ಪಳನ್ನು ಕೊಲೆ ಮಾಡಿರುವುದಾಗಿ ಚೆರಿಯಪಂಬುವಿನಲ್ಲಿ ವಾಸವಿರುವ ಮಗಳು ಚೈತ್ರ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಪೋಕ್ಲು ಪೊಲೀಸರು ಕೇಸು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಸ್ಥಳಕ್ಕೆ ಡಿವೈಎಸ್‍ಪಿ ದಿನೇಶ್, ವೃತ್ತ ನಿರೀಕ್ಷಕ ದಿವಾಕರ್, ಠಾಣಾಧಿಕಾರ ಆರ್. ಕಿರಣ್, ಎಎಸ್‍ಐ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶವವನ್ನು ನಾಪೋಕ್ಲು ಆಸ್ಪತ್ರೆಗೆ ತಂಡ ಸಂದರ್ಭ ವೈದ್ಯಾಧಿಕಾರಿ ಡಾ. ಮದನ್ ಸಂಶಯಗೊಂಡು ನಾಪೋಕ್ಲು ಪೊಲೀಸರಿಗೆ ಮಾಹಿತಿ ನೀಡಿದರು. ಆರೋಪಿ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.