ಮಂಡಿ ನೋವಿಗೆ ಮನೆಯಲ್ಲೇ ಸರಳ ಪರಿಹಾರ

27/05/2020

ಮಂಡಿ ನೋವು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನವರನ್ನು ಕಾಡುತ್ತಿರುತ್ತದೆ. ಆರ್ಥೊಪೆಡಿಕ್ ತಜ್ಞರು ಮತ್ತು ವೈದ್ಯರ ಪ್ರಕಾರ ಇದಕ್ಕೆ ಹಲವಾರು ಕಾರಣಗಳು ಇರುತ್ತವೆಯಂತೆ. ಇವು ಮಂಡಿಗಳನ್ನು ಗಟ್ಟಿ ಮಾಡುತ್ತದೆ, ಹಾಗೂ ಇದರಿಂದ ಜನರು ಆಗಾಗ ಕಾಲುಗಳನ್ನು ನೇರ ಮಾಡಿ ಸಡಿಲ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅಲದೆ ಇದರ ನೋವು ಯಾತನದಾಯಕವಾಗಿರುತ್ತದೆ.

ಸಾಮಾನ್ಯವಾಗಿ ಇದು 60 ವರ್ಷ ಮೇಲ್ಪಟ್ಟವರು ಈ ಮಂಡಿ ನೋವಿಗೆ ಸುಲಭವಾಗಿ ಗುರಿಯಾಗುತ್ತಿದ್ದರು. ಆದರೆ ಇದು ಈಗ ತಾರ್ಕಿಕವಾಗಿ ಸಮ್ಮತವಲ್ಲ. ಏಕೆಂದರೆ ಹಲವಾರು ಯುವ ಜನರು ಇದಕ್ಕೆ ಈಗಾಗಲೇ ಗುರಿಯಾಗಿದ್ದಾರೆ. ಅವರಲ್ಲಿಯೂ ಸಹ ಮಂಡಿ ಊತ ಕಂಡು ಬರುತ್ತಿದೆ. ಇದಕ್ಕಾಗಿ ಇಂದು ಹಲವಾರು ಔಷಧಿಗಳು ದೊರೆಯುತ್ತಿದ್ದರೂ, ಮನೆ ಮದ್ದುಗಳನ್ನು ಬಳಸಿ ಇವುಗಳನ್ನು ಸುಲಭವಾಗಿ ಗುಣ ಮುಖ ಮಾಡಿಕೊಳ್ಳಬಹುದು.

ಈರುಳ್ಳಿ ಸೇವನೆ: ಸಲ್ಫರ್ ಹಾಗೂ ಉತ್ಕರ್ಷಣ ನಿರೋಧಿ ಗುಣಗಳಿಂದ ಕೂಡಿರುವ ಈರುಳ್ಳಿ ನೋವುಗಳನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಈರುಳ್ಳಿ ಕರುಳಿನ ಚಲನೆಗೂ ಉತ್ತಮವಾಗಿದೆ.

ತೆಂಗಿನ ಎಣ್ಣೆಯ ಮಸಾಜ್: ಬೆಚ್ಚಗಿನ ತೆಂಗಿನೆಣ್ಣೆಯನ್ನು ನೋವಿರುವ ಮಂಡಿಗೆ ಮಸಾಜ್ ಮಾಡುವುದರಿಂದ ಮಂಡಿ ನೋವಿನಿಂದ ಮುಕ್ತಿ ದೊರೆಯುತ್ತದೆ. ಉಗುರು ಬೆಚ್ಚನೆಯ ತೆಂಗಿನೆಣ್ಣೆಯಿಂದ ಮಸಾಜ್ ಮಾಡುವುದರಿಂದ ನೋವಿನಿಂದ ತುರ್ತು ಪರಿಹಾರ ದೊರೆಯುತ್ತದೆ.

ಅರಶಿನ ಹಾಲು ಸೇವನೆ: ಅರಶಿನ ಹಾಲು ಸೇವನೆ ಮಾಡುವುದು ಮಂಡಿ ನೋವಿಗೆ ಉಪಶಮನವನ್ನು ಒದಗಿಸುವ ಒಂದು ಮನೆಮದ್ದಾಗಿದ್ದು ನಿಮಗೆ ತಕ್ಷಣ ಆರಾಮವನ್ನು ನೀಡುತ್ತದೆ. ದಿನವೂ ಅರಶಿನ ಬೆರೆತ ಹಾಲನ್ನು ಕುಡಿಯಿರಿ. ಈ ಸಾಂಬಾರು ಪದಾರ್ಥವು ಆಂಟಿಸೆಪ್ಟಿಕ್ ಆಗಿದೆ. ಹಾಲು ಮೂಳೆಗಳಿಗೆ ಅತ್ಯುತ್ತಮ.

ಯೋಗ ಅಭ್ಯಾಸ: ದಿನವೂ ಮಂಡಿ ನೋವಿಗೆ ಸಂಬಂಧಿಸಿದ ಕೆಲವು ಯೋಗ ಆಸನಗಳ ಅಭ್ಯಾಸ ಮಾಡುವುದರಿಂದ ನೋವು ನಿಧಾನವಾಗಿ ನಿವಾರಣೆಯಾಗುತ್ತದೆ.

ಮಂಡಿ ಬಲಪಡಿಸುವ ವ್ಯಾಯಾಮಗಳು ಯೋಗದಲ್ಲಿ ಮಂಡಿಯನ್ನು ಬಲಪಡಿಸುವ ಆಸನಗಳಿವೆ. ಅವುಗಳನ್ನು ನಿಯಮಿತವಾಗಿ ಮಾಡುವುದರಿಂದ ಮಂಡಿ ನೋವು ಕಡಿಮೆಯಾಗುವುದು.