ಟಿಕ್‌ಟಾಕ್‌ನಲ್ಲಿ ಗಮನ ಸೆಳೆಯುತ್ತಿದೆ ಮೇಕಪ್ ಚಾಲೆಂಜ್

27/05/2020

ಕೊರೊನಾ ವೈರಸ್ ಭಯದ ಈಗ ಎಲ್ಲರನ್ನೂ ಮನೆಯೊಳಗೇ ಇರುವಂತೆ ಮಾಡಿದೆ. ಮನೆಯಿಂದ ಹೊರ ಬಂದರೆ ಎಲ್ಲಿ ಈ ಮಾರಕ ವೈರಾಣು ತಮ್ಮ ದೇಹದೊಳಗೂ ಸೇರಿಕೊಳ್ಳತ್ತದೋ ಏನೋ ಎಂಬ ಭಯದಲ್ಲೇ ಜನ ಜೀವನ ನಡೆಸುತ್ತಿದ್ದಾರೆ. ಹೀಗಾಗಿ, ವಿಶ್ವದ ಬಹುತೇಕ ರಾಷ್ಟ್ರಗಳು ಸ್ತಬ್ಧವಾಗಿವೆ. ಮನೆಯಿಂದ ಹೊರಗೆ ಹೋಗಲು ಅವಕಾಶ ಇಲ್ಲದೇ ಇರುವುದರಿಂದ ಜನ ಕೂಡಾ ಟೆನ್ಷನ್‌ನಲ್ಲಿದ್ದಾರೆ. ಯಾಕೆಂದರೆ, ಮನೆಯೊಳಗೆ ಸುಮ್ಮನೆ ಕುಳಿತುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಹೆಚ್ಚಿನವರಿಗೆ ಸುಲಭವಾಗಿ ಇದಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗುವುದಿಲ್ಲ.

ಹೀಗಾಗಿ, ಜನ ನಾನಾ ರೀತಿಯಲ್ಲಿ ತಮ್ಮನ್ನು ತಾವು ಬ್ಯುಸಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಜೊತೆಗೆ, ಕೆಲ ಸಾಮಾಜಿಕ ಮಾಧ್ಯಮಗಳಲ್ಲೂ ಹೊಸ ಹೊಸ ಚಾಲೆಂಜ್‌ಗಳು ಸೃಷ್ಟಿಯಾಗುತ್ತಿವೆ. ಸದ್ಯ ಟಿಕ್‌ಟಾಕ್‌ನಲ್ಲಿ ಮೇಕಪ್ ಚಾಲೆಂಜ್ ಶುರುವಾಗಿದೆ. ಈ ಚಾಲೆಂಜ್ ಕೂಡಾ ಚಿತ್ರವಿಚಿತ್ರವಾಗಿದೆ.