ಹೋಪ್‍ಟ್ರಸ್ಟ್ ನಿಂದ ವಿರಾಜಪೇಟೆ ಆರೋಗ್ಯ ಮತ್ತು ಪೋಲೀಸ್ ತಂಡಕ್ಕೆ ಗೌರವ ಸಲ್ಲಿಕೆ

27/05/2020

ಮಡಿಕೇರಿ ಮೇ 27: ವಿರಾಜಪೇಟೆ ಸಮಾಜಸೇವಾ ಸಂಸ್ಥೆಯಾದ ಹೋಪ್‍ಟ್ರಸ್ಟ್ ವತಿಯಿಂದ ಕೊರೊನ ವೈರಸ್ ವಿರುದ್ಧ ಹೋರಾಟದಲ್ಲಿ ನಿರತರಾಗ್ತಿರುವ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ತಂಡಕ್ಕೆ ಹಾಗೂ ನಗರ ಆರಕ್ಷಕ ತಂಡಕ್ಕೆ ಆಸ್ಪತ್ರೆಯ ಸಭಾಂಗಣದಲ್ಲಿ ಶಾಲು ಹೊದಿಸಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ ನಗರ ಪೊಲೀಸ್ ಠಾಣಾಧಿಕಾರಿ ಹೆಚ್. ಮರಿಸ್ವಾಮಿ ಮಾತನಾಡಿ ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ತಂಡ ಕೊರೊನ ವೈರಸ್‍ಗೆ ಸಂಬಂಧಿಸಿದಂತೆ ವಿವಿಧೆಡೆಗಳಿಂದ ಆಗಮಿಸುವವರನ್ನು ಆಸ್ಪತ್ರೆಗೆ ಕಳುಹಿಸಿದಾಗ ಯಾವುದೇ ಸಮಯದಲ್ಲಿ ಸ್ಪಂದಿಸುತ್ತಿದ್ದರು. ಕೊರೊನ ವಿರುದ್ಧದ ಹೋರಾಟಕ್ಕೆ ಆರೋಗ್ಯ ತಂಡವೇ ಮುನ್ನೆಚ್ಚರಿಕೆಯ ಸೇವೆಗಾಗಿ ಸಿದ್ಧತೆಯನ್ನು ಮಾಡಿಕೊಂಡಿರುವುದರಿಂದ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯವಾಯ್ತು. ಈ ತಂಡವನ್ನು ಸನ್ಮಾನಿಸುವ ಹೋಪ್ ಟ್ರಸ್ಟ್‍ನ ಸೇವೆ ಸ್ತುತ್ಯರ್ಹವಾದುದು” ಎಂದರು. ಕಾರ್ಯಕ್ರಮವನ್ನುದ್ದೇಶಿಸಿ ಮಸ್ಜಿದ್-ಎ-ಅಝಂ ಅಧ್ಯಕ್ಷ ಎಸ್.ವೈ.ನಿಸಾರ್ ಅಹಮದ್, ಸುಂಟಿಕೊಪ್ಪದ ಸಮಾಜಸೇವಕ ನಿಯಾಝ್ ಹಿತನುಡಿಗಳನ್ನು ಆಡಿದರು.
ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ||.ವಿಶ್ವನಾಥ್ ಸಿಂಪಿ, ಡಾ||ಅನಿಲ್‍ಧವನ್, ಡಾ||ಶ್ರೀನಿವಾಸ್ ಮೂರ್ತಿ,ಡಾ||ಗಿರಿಧರ್, ಡಾ||ಆನಂದ್, ಡಾ||ಹೇಮಾಪ್ರಿಯ, ಡಾ||ರೇಣುಕಾ ಸೇರಿದಂತೆ ಸುಶ್ರೂಷಿಕಿಯರು ಹಾಗೂ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಹೋಪ್‍ಟ್ರಸ್ಟ್ ಸಂಘಟನೆಯ ಅಧ್ಯಕ್ಷ ಇಸ್ಮಾಯೀಲ್ ಶರೀಫ್ (ಅಖೀಲ್), ಡಿ.ಐ.ಏಜಾಜ್ ಅಹಮ್ಮದ್, ಖಾಝಿಂ, ಇಂತಿಯಾಜ್, ಸಿ.ಎ.ರಾಜಿಕ್ ಮತ್ತಿತರರು ಹಾಜರಿದ್ದರು. ಸಂಘಟನೆಯ ಆಸಿಪ್ ಕಾರ್ಯಕ್ರಮಗಳನ್ನು ನಿರೂಪಿಸಿದರು.