ಸೋಮವಾರಪೇಟೆಯಲ್ಲಿ ರಕ್ತದಾನ ಶಿಬಿರ

27/05/2020

ಸೋಮವಾರಪೇಟೆ ಮೇ 27 : ಸೋಮವಾರಪೇಟೆ ಪಟ್ಟಣದ ಪುಷ್ಪಗಿರಿ ಜೇಸಿ ಸಂಸ್ಥೆ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು.
ಮಡಿಕೇರಿ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ.ಕರುಂಬಯ್ಯ, ಡಾ.ಸತೀಶ್ ಕುಮಾರ್, ಜೇಸಿ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್, ಪದಾಧಿಕಾರಿಗಳಾದ ಮಂಜುಳಾ ಸುಬ್ರಮಣಿ, ವಿದ್ಯಾಸೋಮೇಶ್, ಜೇಸಿ ಪ್ರಮುಖರಾದ ಗುರುಪ್ರಸಾದ್, ಗಿರೀಶ್, ಮನೋಹರ್, ಅರುಣ್ ಕುಮಾರ್, ಜಯೇಶ್, ನಿರಂಜನ್, ಪದ್ಮಜಾ ಅಶೋಕ್, ಮೀನಾ ಮಂಜುನಾಥ್, ರಾಜೇಶ್ ಹಾಜರಿದ್ದರು.