ಹಿಟಾಚಿಯಡಿಯಲ್ಲಿ ಸಿಲುಕಿ ಯುವಕ ಸಾವು : ಸೋಮವಾರಪೇಟೆಯಲ್ಲಿ ಘಟನೆ

May 27, 2020

ಸೋಮವಾರಪೇಟೆ ಮೇ 27 : ಹಿಟಾಚಿ ಅಡಿಯಲ್ಲಿ ಸಿಲುಕಿ ಯುವಕನೋರ್ವ ಮೃತಪಟ್ಟಿರುವ ಘಟನೆ ಮೋರಿಕಲ್ಲು ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಜಾರ್ಖಂಡ್ ರಾಜ್ಯದ ಕಾರ್ಮಿಕ ಅಜಯ್(21) ಮೃತಪಟ್ಟವ. ಬೆಳಿಯಪ್ಪ ಎಂಬವರ ಕಲ್ಲುಕೋರೆಯಲ್ಲಿ ಅಜಯ್ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ, ಜಾರ್ಖಂಡ್‍ನ ಚಂದ್ರಕುಮಾರ್ ಎಂಬವನು ಚಾಲಿಸುತ್ತಿದ್ದ ಹಿಟಾಚಿ ಮಗುಚಿ ಅಜಯ್ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಂದ್ರಕುಮಾರ್ ವಿರುದ್ಧ ಪಟ್ಟಣದ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಸ್ಥಳಕ್ಕೆ ವೃತ್ತನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶವಪರೀಕ್ಷೆಯ ನಂತರ ಕುಟುಂಬಸ್ಥರು ಜಾರ್ಖಂಡ್‍ಗೆ ಮೃತ ಶರೀರರನ್ನು ಸಾಗಿಸಿದ್ದಾರೆ.