ಬಾವಿಗೆ ಬಿದ್ದು ಮಗು ಸಾವು : ಆರ್ಜಿ ಗ್ರಾಮದಲ್ಲಿ ಘಟನೆ

27/05/2020

ಮಡಿಕೇರಿ ಮೇ 27 : ಒಂದು ವರ್ಷದ ಗಂಡು ಮಗುವೊಂದು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ವಿರಾಜಪೇಟೆಯ ಆರ್ಜಿ ಗ್ರಾಮದ ತೋಟದ ಲೈನ್‍ಮನೆಯೊಂದರ ಸಮೀಪ ನಡೆದಿದೆ.
ಮನು ಎಂಬುವವರ ಪುತ್ರ ನೆಲ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ.
ಮನೆ ಮುಂದೆ ಆಟವಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ನೆಲಬಾವಿಗೆ ಬಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅದಾಗಲೇ ಮಗು ಸಾವನ್ನಪ್ಪಿತ್ತು. ವಿರಾಜಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.