ಸ್ನಾನಕ್ಕೆ ತೆರಳಿದ ವ್ಯಕ್ತಿ ನೀರು ಪಾಲು : ವಿರಾಜಪೇಟೆಯಲ್ಲಿ ಘಟನೆ

27/05/2020

ಮಡಿಕೇರಿ ಮೇ 27 : ಸ್ನಾನ ಮಾಡಲೆಂದು ಕೆರೆಗೆ ಇಳಿದ ವ್ಯಕ್ತಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ಸಮೀಪದ ಕಂಡಿಮಕ್ಕಿಯಲ್ಲಿ ನಡೆದಿದೆ. ತೋಟದ ಲೈನ್‍ಮನೆಯಲ್ಲಿ ವಾಸವಿದ್ದ ಕಾರ್ಮಿಕ ಚಿಕ್ಕ (40) ಎಂಬಾತನೇ ಮೃತ ದುರ್ದೈವಿ.
ಘಟನಾ ಸ್ಥಳಕ್ಕೆ ವಿರಾಜಪೇಟೆ ವೃತ್ತ ನಿರೀಕ್ಷಕ ಕ್ಯಾತೇಗೌಡ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.