ಭಾರತದ ವಿರುದ್ಧ ಇಮ್ರಾನ್ ಅಸಮಾಧಾನ

28/05/2020

ಇಸ್ಲಾಮಾಬಾದ್ ಮೇ 27 : ಭಾರತ ತನ್ನ ಸೊಕ್ಕಿನ ವಿಸ್ತರಣಾ ನೀತಿಗಳ ಮೂಲಕ ನೆರೆರಾಷ್ಟ್ರಗಳಿಗೆ ಬೆದರಿಕೆ ಹಾಕಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದರು.
ಲಡಾಖ್‍ನಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್‍ಎಸಿ) ಉದ್ದಕ್ಕೂ ಚೀನಾ ಜೊತೆಗಿನ ಉದ್ವಿಗ್ನತೆ ಮತ್ತು ನೇಪಾಳದೊಂದಿಗಿನ ಗಡಿ ವಿವಾದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಈ ಆರೋಪ ಮಾಡಿದ್ದಾರೆ.
ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಇಮ್ರಾನ್ ಖಾನ್ ಈ ಟ್ವೀಟ್ ಮಾಡಿದ್ದಾರೆ, “ನಾಜಿಯ ಲೆಬೆನ್ಸ್‍ರಾಮ್(ಲಿವಿಂಗ್ ಸ್ಪೇಸ್)ಗೆ ಹೋಲುವ ಸೊಕ್ಕಿನ ವಿಸ್ತರಣಾ ನೀತಿಗಳನ್ನು ಹೊಂದಿರುವ ಹಿಂದುತ್ವ ಅಧಿಪತ್ಯದ ಮೋದಿ ಸರ್ಕಾರ ಭಾರತದ ನೆರೆ ರಾಷ್ಟ್ರಗಳಿಗೆ ಅಪಾಯಕಾರಿಯಾಗುತ್ತಿದೆ. ಪೌರತ್ವ ಕಾಯ್ದೆ, ನೇಪಾಳ ಮತ್ತು ಚೀನಾದೊಂದಿಗಿನ ಗಡಿ ವಿವಾದಗಳು ಮತ್ತು ಸುಳ್ಳು ಧ್ವಜ ಕಾರ್ಯಾಚರಣೆಯ ಮೂಲಕ ಬೆದರಿಕೆ ಹಾಕುತ್ತಿದೆ ಎಂದು ಟ್ವೀಟಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಕಾನೂನುಬಾಹಿರ ಎಂದು ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ.