ರಾಜ್ಯದಲ್ಲಿ ಸೋಂಕು ಅತಿರೇಕ

28/05/2020

ಬೆಂಗಳೂರು ಮೇ 27 : ಕರ್ನಾಟಕದಲ್ಲಿ ಇಂದು ಮೂವರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದು ಹೊಸದಾಗಿ 135 ಕೊರೋನಾ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 2418ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಸಚಿವಾಲಯ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಮಧ್ಯಾಹ್ನದವರೆಗೂ 135 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2405ಕ್ಕೆ ಏರಿಕೆಯಾಗಿದೆ. ಈವರೆಗೂ 762 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದು ಕಲಬುರ್ಗಿ – 28 , ಉತ್ತರ ಕನ್ನಡ – 6, ಚಿಕ್ಕಮಗಳೂರು – 3, ದಕ್ಷಿಣ ಕನ್ನಡ – 11, ಯಾದಗಿರಿ – 16, ಹಾಸನ-14, ಉಡುಪಿ-9, ಬೆಂಗಳೂರು ನಗರ -6, ಬೆಂಗಳೂರು ಗ್ರಾಮಾಂತರ -2, ಬಳ್ಳಾರಿ -1, ಬೀದರ್-12, ಬೆಳಗಾವಿ-4, ರಾಯಚೂರು-5, ವಿಜಯಪುರ-2, ಮಂಡ್ಯ-1, ತುಮಕೂರು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2418ಕ್ಕೆ ಏರಿಕೆಯಾಗಿದೆ.