ಕೋವಿಡ್ ಸೋಂಕು ಪತ್ತೆಗೆ ಮತ್ತೆ 5 ಕಿಯೋಸ್ಕ್ ನಿರ್ಮಾಣ

28/05/2020

ಮಡಿಕೇರಿ ಮೇ 28 : ಕೋವಿಡ್ ಸೋಂಕು ಪತ್ತೆಗಾಗಿ ಕೊಡಗು ಜಿಲ್ಲೆಯಲ್ಲಿ ಮತ್ತೆ 5 ಮಾದರಿ ಸಂಗ್ರಹಣಾ ಕಿಯೋಸ್ಕ್ ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ.
ಈ ಪೈಕಿ 3 ಕಿಯೋಸ್ಕ್ ಗಳನ್ನು ಕ್ಲಬ್ ಮಹೀಂದ್ರ ಸಂಸ್ಥೆ ಮತ್ತು ತಲಾ 1 ಕಿಯೋಸ್ಕ್ ನ್ನು ಟಾಟಾ ಕಾಫಿ ಸಂಸ್ಥೆ ಮತ್ತು ತೀತೀರ ಜಾಸನ್ ಮತ್ತು ದರೇನ್ ಚಿನ್ನಪ್ಪ ಇವರು ಪ್ರಾಯೋಜಿಸಿದ್ದಾರೆ.
ಈ ಹೊಸ 5 ಕಿಯೋಸ್ಕ್ ಗಳು ಸೇರಿದಂತೆ ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 10 ಮಾದರಿ ಸಂಗ್ರಹಣಾ ಕಿಯೋಸ್ಕ್ ಗಳಿವೆ. ಸದರಿ ಕಿಯೋಸ್ಕ್ ಗಳನ್ನು ಮಡಿಕೇರಿಯ ಮೆಡಿಕಲ್ ಕಾಲೇಜು, ಸೋಮವಾರಪೇಟೆಯ ತಾಲ್ಲೂಕು ಆಸ್ಪತ್ರೆ ಮತ್ತು ವಿರಾಜಪೇಟೆ, ಸಮುದಾಯ ಆರೋಗ್ಯ ಕೇಂದ್ರ, ಕುಶಾಲನಗರ, ಗೋಣಿಕೊಪ್ಪ, ಶನಿವಾರಸಂತೆ, ಕುಟ್ಟ, ನಾಪೋಕ್ಲು, ಸಿದ್ಧಾಪುರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸುಂಟಿಕೊಪ್ಪದಲ್ಲಿ ಸ್ಥಾಪಿಸಲಾಗಿದೆ.