ಜಿಲ್ಲೆಯಲ್ಲಿ 298 ಮಂದಿಗೆ ಸಂಪರ್ಕ ತಡೆ

28/05/2020

ಮಡಿಕೇರಿ ಮೇ 28 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಇತರೆ ದೇಶ/ರಾಜ್ಯಗಳಿಂದ ಪಾಸ್ ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಸಾಂಸ್ಥಿಕ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ.
ಇತರೆ ದೇಶ/ರಾಜ್ಯ/ಜಿಲ್ಲೆಗಳಿಂದ ಕಳೆದ 14 ದಿನಗಳಲ್ಲಿ ಪಾಸ್ ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರ ಪೈಕಿ ಸಂಪರ್ಕ ತಡೆಯಲ್ಲಿರುವವರು ಇತರೆ ದೇಶದ ಜನರು 14, ಇತರೆ ರಾಜ್ಯದ ಜನರು 284 ಒಟ್ಟು 298 ಮಂದಿ ಇದ್ದಾರೆ.

ಪ್ರಯೋಗಾಲಯ ಪರೀಕ್ಷಾ ವರದಿ ವಿವರ:
ಇಲ್ಲಿಯವರೆಗೆ ಒಟ್ಟು 2287 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಪಾಸಿಟಿವ್ ಪ್ರಕರಣಗಳು- 3 (ಒಬ್ಬರು ಗುಣಮುಖರಾಗಿದ್ದಾರೆ), ನೆಗೆಟಿವ್ ವರದಿ ಬಂದ ಪ್ರಕರಣಗಳು 2214, ವರದಿ ನಿರೀಕ್ಷಿತ ಪ್ರಕರಣಗಳು 70 ಇವೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿರುವ ಪ್ರಕರಣಗಳು:
ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ 60 ಜನರು ದಾಖಲಿರುತ್ತಾರೆ.