ಕೊಲೆ ಪ್ರಕರಣ : ಆರೋಪಿ ಬಂಧನ

May 28, 2020

ಮಡಿಕೇರಿ ಮೇ 28 : ನಾಪೋಕ್ಲು ಸಮೀಪದ ಕಿರುಂದಾಡು ಗ್ರಾಮದಲ್ಲಿ ಪಿರಿಯಾಪಟ್ಟಣದ ಪುಷ್ಪ ಎಂಬವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಿದ್ದು ಎಂಬಾತನನ್ನು ಪಾರಾಣೆ ಬಸ್ಸು ನಿಲ್ದಾಣದಲ್ಲಿ ನಾಪೋಕ್ಲು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ಮತ್ತು ಪುಷ್ಪ ಕಿರುಂದಾಡು ಗ್ರಾಮದ ಅಪ್ಪನೆರವಂಡ ರಾಧಾಕೃಷ್ಣ ಎಂಬವರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಮೇ 26 ರಂದು ಇಬ್ಬರ ನಡುವೆ ಕಲಹ ನಡೆದು ಸಿದ್ದು ಪುಷ್ಪಳನ್ನು ದೊಣ್ಣೆಯಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಡಿವೈಎಸ್‍ಪಿ ದಿನೇಶ್ ಅವರ ಮಾರ್ಗದರ್ಶ, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್ ನೇತೃತ್ವದಲ್ಲಿ ನಾಪೋಕ್ಲು ಠಾಣಾಧಿಕಾರಿ ಆರ್.ಕಿರಣ್ ಮತ್ತು ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಇದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.