ಹಸಿ, ಒಣ ಕಸ ವಿಂಗಡಿಸದಿದ್ದರೆ ದಂಡ : ನಾಪೋಕ್ಲು ಗ್ರಾ. ಪಂ. ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಎಚ್ಚರಿಕೆ

28/05/2020

ಮಡಿಕೇರಿ ಮೇ 28 : ನಾಪೋಕ್ಲು ಪಟ್ಟಣದಲ್ಲಿ ಎಲ್ಲಾ ಅಂಗಡಿ ಮಾಲೀಕರು ಒಣಕಸ ಮತ್ತು ಹಸಿಕಸ ವಿಂಗಡಿಸದಿದ್ದರೆ ದಂಡ ವಿಧಿಸಲಾಗವುದು ಎಂದು ನಾಪೋಕ್ಲು ಗ್ರಾ. ಪಂ. ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಎಚ್ಚರಿಕೆ ನೀಡಿದರು.
ಕಸ ವಿಲೇವಾರಿ ಹಾಗೂ ಪ್ರವಾಹ ಮುನ್ನೆಚ್ಚರಿಕೆ ಬಗ್ಗೆ ಕರೆಯಲಾಗಿದ್ದ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ 14ನೇ ಹಾಣಕಾಸು ಯೋಜನೆಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭ ಮಡಿಕೇರಿ ತಾ. ಪಂ. ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ಗ್ರಾ. ಪಂ. ಉಪಾಧ್ಯಕ್ಷೆ ಕಾಳೆಯಡ ಸಾಬಾ ತಿಮ್ಮಯ್ಯ ಇದ್ದರು.