ಕೊಡಗಿನಲ್ಲಿ ಮಳೆಗಾಲದ ಮುನ್ಸೂಚನೆ : ರಾತ್ರಿ ವೇಳೆ ಉತ್ತಮ ಮಳೆ

28/05/2020

ಮಡಿಕೇರಿ ಮೇ 28 : ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಮುನ್ಸೂಚನೆ ಕಂಡು ಬಂದಿದೆ. ಹವಾಮಾನ ಇಲಾಖೆ ಜೂನ್ 5 ರ ನಂತರ ಮುಂಗಾರು ಆರಂಭಗೊಳ್ಳಲಿದೆ ಎಂದು ತಿಳಿಸಿದ್ದರೂ ಜಿಲ್ಲೆಯಲ್ಲಿ ಈಗಿನಿಂದಲೇ ಮೋಡ ಕವಿದ ವಾತಾವರಣ ಕಂಡು ಬಂದಿದೆ. ರಾತ್ರಿ ವೇಳೆ ಉತ್ತಮ ಗುಡುಗು ಸಹಿತ ಗಾಳಿ ಮಳೆಯಾಗುತ್ತಿದ್ದು, ಗ್ರಾಮೀಣ ಜನರಲ್ಲಿ ಆತಂಕ ಮೂಡಿದೆ. ಆದರೆ ಹಗಲಿನ ವೇಳೆಯಲ್ಲಿ ಮೈಸುಡುವ ಬಿಸಿಲು ಜನರನ್ನು ಕಾಡುತ್ತಿದೆ.