ವರ್ಷದ ಹಿಂದೆ ನಾಪತ್ತೆಯಾಗಿರುವ ವ್ಯಕ್ತಿ ಪತ್ತೆಗೆ ತನಿಖೆ ಚುರುಕು

28/05/2020

ಮಡಿಕೇರಿ ಮೇ 28 : ವರ್ಷದ ಹಿಂದೆ ಚೇರಂಬಾಣೆಯ ಪಾಕ ದೇವಾಲಯದ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಮಡಿಕೇರಿಯ ನಿವೃತ್ತ ಪೊಲೀಸ್ ಅಧಿಕಾರಿ ನಂಜುಂಡ ಎಂಬುವವರ ಪತ್ತೆ ಕಾರ್ಯಕ್ಕೆ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ತಿಳಿಸಿದ್ದಾರೆ.
ದೇವಾಲಯಕ್ಕೆಂದು ತೆರಳಿದ್ದ ನಂಜುಂಡ ಅವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ಎರಡು ದಿನಗಳ ಹಿಂದೆ ಚೇರಂಬಾಣೆಯ ಕಾಡು ದಾರಿಯಲ್ಲಿ ನಂಜುಂಡ ಅವರು ಧರಿಸಿದ್ದ ಬಟ್ಟೆಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ತಿರುವು ದೊರೆತ್ತಿದೆ.