ಪ್ರಾಕೃತಿಕ ವಿಕೋಪ ನಿಯಂತ್ರಣಾ ಕೊಠಡಿ 24 ಗಂಟೆ ಕಾರ್ಯ ನಿರ್ವಹಿಸಲಿದೆ

28/05/2020

ಮಡಿಕೇರಿ ಮೇ 28 : ಜಿಲ್ಲೆಯಲ್ಲಿ ಸಂಭವಿಸುವ ಯಾವುದೇ ಪ್ರಾಕೃತಿಕ ವಿಕೋಪಕ್ಕೆ ತಕ್ಷಣ ಸ್ಪಂದಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಾಕೃತಿಕ ವಿಕೋಪ ನಿಯಂತ್ರಣಾ ಕೊಠಡಿ(ಸಂಖ್ಯೆ :1077 ವಾಟ್ಸಾಪ್ ಸಂ: 8550001077) ಯನ್ನು ಸನ್ನದ್ಧವಾಗಿರಿಸಿದ್ದು, ಈ ನಿಯಂತ್ರಣ ಕೊಠಡಿಯು 24*7 ಕಾರ್ಯ ನಿರ್ವಹಿಸಲಿದೆ.
ಅಪಾಯದ ಸ್ಥಳದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಸ್ಥಳೀಯ ಪ್ರಾಧಿಕಾರಿಗಳ ಮೂಲಕ ಜನರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.