ಮಳೆಗಾಲ ಬಂದರೂ ಡಾಂಬರೀಕರಣ ಕಾಣದ ಮಡಿಕೇರಿ ನಗರದ ರಸ್ತೆಗಳು

28/05/2020

ಮಡಿಕೇರಿ ಮೇ 28 : ಮಳೆಗಾಲ ಕೊಡಗನ್ನು ಪ್ರವೇಶಿಸಲು ಒಂದೆರಡು ದಿನಗಳಷ್ಟೇ ಬಾಕಿ ಉಳಿದಿದೆ, ಆದರೆ ಕಳೆದ ವರ್ಷದ ಮಳೆಗಾಲದಲ್ಲಿ ಹದಗೆಟ್ಟ ಮಡಿಕೇರಿ ನಗರಸಭಾ ವ್ಯಾಪ್ತಿಯ ರಸ್ತೆಗಳು ಇಂದಿಗೂ ದುರಸ್ತಿ ಕಂಡಿಲ್ಲ. ಎಲ್ಲಾ ಪ್ರಮುಖ ರಸ್ತೆಗಳು ಹಾಗೂ ವಿವಿಧ ಬಡಾವಣೆಗಳ ರಸ್ತೆಗಳು ಹಳ್ಳಕೊಳ್ಳಗಳಿಂದ ಕೂಡಿದ್ದು, ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಲದಲ್ಲಿ ನೀರು ನಿಂತರೆ ವಾಹನಗಳು ಮಾತ್ರವಲ್ಲ ಪಾದಾಚಾರಿಗಳು ಕೂಡ ಓಡಾಡಲು ಸಾಧ್ಯವಿಲ್ಲವೆಂದು ನಾಗರೀಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.