ಸರ್ಕಾರದ ಪರಿಹಾರದಿಂದ ಚಾಲಕರಿಗೆ ಲಾಭವಿಲ್ಲ : ಉಸ್ಮಾನ್ ಟೀಕೆ

28/05/2020

ಮಡಿಕೇರಿ ಮೇ 28 : ಲಾಕ್‍ಡೌನ್‍ನಿಂದಾಗಿ ಕಾರ್ಮಿಕರಂತೆ ಚಾಲಕರು ಕೂಡ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆಟೋಚಾಲಕರಿಗಾಗಿ ಘೋಷಣೆಯಾಗಿರುವ 5 ಸಾವಿರ ರೂ. ಗಳ ಫ್ಯಾಕೇಜ್ ಆಟೋ ಮಾಲೀಕರಿಗಷ್ಟೇ ಲಭಿಸುವುದರಿಂದ ಬಾಡಿಗೆ ಆಟೋ ಪಡೆದು ಓಡಿಸುವ ಚಾಲಕರಿಗೆ ಯಾವುದೇ ಲಾಭವಾಗುವುದಿಲ್ಲವೆಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಟೀಕಿಸಿದ್ದಾರೆ.
ಸರ್ಕಾರದ ಸೌಲಭ್ಯಪಡೆಯಲು ಅಡ್ಡಿಯಾಗಿರುವ ಅಂತರ್ಜಾಲದ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.