ನಾಪತ್ತೆಯಾದ ಯುವತಿಯ ಬಗ್ಗೆ ಮಾಹಿತಿ ನೀಡಲು ಪೊಲೀಸರ ಮನವಿ

28/05/2020

ಮಡಿಕೇರಿ ಮೇ 28 : ಸೋಮವಾರಪೇಟೆ ತಾಲ್ಲೂಕಿನ ಗೋಣಿಮರೂರು ಗ್ರಾಮದ ನಿವಾಸಿ ಭಾಗ್ಯಾನಂದ ಹಾಗೂ ಮುತ್ತಮ್ಮ ದಂಪತಿಗಳ ಪುತ್ರಿ ಲೋಚನ (19) ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಈಕೆಯ ಬಗ್ಗೆ ಮಾಹಿತಿ ದೊರೆತ್ತಲ್ಲಿ ಠಾಣೆಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಯುವತಿ ತಾನು ಕೆಲಸ ಮಾಡುತ್ತಿದ್ದ ರೆಸಾರ್ಟ್‍ನ ಯುವಕನೊಂದಿಗೆ ತೆರಳಿರುವ ಬಗ್ಗೆ ದೂರು ದಾಖಲಾಗಿದೆ. ಲೋಚನಳ ಬಗ್ಗೆ ತಿಳಿದರೆ 08276 282040 ಗೆ ಕರೆ ಮಾಡುವಂತೆ ಠಾಣಾಧಿಕಾರಿ ತಿಳಿಸಿದ್ದಾರೆ.