ಜಿಲ್ಲಾಡಳಿತಕ್ಕೆ ಕಿಯೋಸ್ಕ್ ಹಸ್ತಾಂತರ

28/05/2020

ಮಡಿಕೇರಿ ಮೇ.28(ಕರ್ನಾಟಕ ವಾರ್ತೆ):-ಕೋವಿಡ್-19 ರ ಸಂಬಂಧ ಕೊಡಗು ಜಿಲ್ಲೆಯಲ್ಲಿ ಮತ್ತೆ 05 ಕಿಯೋಸ್ಕ್ (ಮೂಗು ಮತ್ತು ಗಂಟಲು ದ್ರವ ಮಾದರಿ ಸಂಗ್ರಹಣೆ) ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ತಯಾರಿಸಿದ್ದು, ಈ ಕಿಯೋಸ್ಕ್‍ಗಳನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಮೂಲಕ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಕ್ಲಬ್ ಮಹೀಂದ್ರ ಸಂಸ್ಥೆ ವತಿಯಿಂದ 03 ಕಿಯೋಸ್ಕ್ ಹಾಗೂ ಪಾಲಿಬೆಟ್ಟ ಟಾಟಾ ಕಾಫಿ ಸಂಸ್ಥೆ ಮತ್ತು ವಿರಾಜಪೇಟೆಯ ತೀತೀರ ಜಾಸನ್ ಮತ್ತು ದರೇನ್ ಚಿಣ್ಣಪ್ಪ ಅವರಿಂದ ತಲಾ ಒಂದು ಕಿಯೋಸ್ಕ್‍ಗಳನ್ನು ನಗರದ ಕೋವಿಡ್ ಆಸ್ಪತ್ರೆಯಲ್ಲಿ ಹಸ್ತಾಂತರಿಸಲಾಯಿತು.
ಈ ಹೊಸ 05 ಕಿಯೋಸ್ಕ್‍ಗಳನ್ನು ಶನಿವಾರಸಂತೆ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು ಮತ್ತು ಕುಟ್ಟ ಆರೋಗ್ಯ ಕೇಂದ್ರಗಳಿಗೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಾಹಿತಿ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಅಧೀಕ್ಷಕರಾದ ಡಾ.ಲೋಕೇಶ್, ಡಾ.ಮಂಜುನಾಥ್, ಡಾ.ರಾಮಚಂದ್ರ ಕಾಮತ್, ಡಾ.ಮಹೇಶ್, ಕ್ಲಬ್ ಮಹೇಂದ್ರ ವ್ಯವಸ್ಥಾಪಕರಾದ ಸ್ವಾಪನ್ ಕುಮಾರ್ ದಾಸ್, ಪಾಲಿಬೆಟ್ಟದ ಟಾಟಾ ಕಾಫಿ ಲಿಮಿಟೆಡ್‍ನ ಮುಖ್ಯಸ್ಥರಾದ ಎಂ.ಬಿ.ಗಣಪತಿ, ಕ್ಲಬ್ ಮಹೀಂದ್ರದ ಮಾನವ ಸಂಪನ್ಮೂಲ ವಿಭಾಗದ ಕಾರ್ತಿಕೆಯನ್, ಥಾಮಸ್, ನವೀನ್, ಅರುಣ್ ಕುಮಾರ್ ಇತರರು ಇದ್ದರು.