ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಸಂಸ್ಥೆ ಕಾರ್ಯಕಾರಿ ಸಮಿತಿ ಸಭೆ

28/05/2020

ಮಡಿಕೇರಿ ಮೇ.28 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಸಂಸ್ಥೆ ಕಾರ್ಯಕಾರಿ ಸಮಿತಿ ಸಭೆಯು ಇತ್ತೀಚೆಗೆ ನಗರದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆಯಿತು.
ಆಯುಕ್ತರಾದ ಜಿಮ್ಮಿ ಸಿಕ್ವೆರಾ ಅವರು ಜಿಲ್ಲಾ ಸಂಸ್ಥೆಗೆ ನೂತನವಾಗಿ ಜಿಲ್ಲಾ ಪ್ರಧಾನ ಆಯುಕ್ತರಾಗಿ ಆಯ್ಕೆಯಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪೆರಿಗ್ರೀನ್ ಮಚ್ಚಾಡೋ ಅವರಿಗೆ ಕಂಠವಸ್ತ್ರ ಧರಿಸುವ ಮೂಲಕ ಸ್ವಾಗತ ಕೋರಿದರು.
ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ಸ್ಕೌಟ್ಸ್ ಮತ್ತು ಗೈಡ್ಸ್‍ನ ಆಯುಕ್ತರಾದ ಜಿಮ್ಮಿ ಸಿಕ್ವೆರಾ, ಜಿಲ್ಲಾ ಕಾರ್ಯದರ್ಶಿ ಶಾಲಿನಿ, ಸ್ಕೌಟ್ಸ್ ಮತ್ತು ಗೈಡ್ಸ್‍ನ ಪ್ರತಿನಿಧಿ ದೇವಾನಂದ ಇತರರು ಇದ್ದರು. ಸ್ಕೌಟ್ಸ್ ಮತ್ತು ಗೈಡ್ಸ್‍ನ ಕಾರ್ಯಚಟುವಟಿಕೆ ಬಗ್ಗೆ ಚರ್ಚಿಸಲಾಯಿತು.
ಜಿಮ್ಮಿ ಸಿಕ್ವೆರಾ ಅವರು ಮಾತನಾಡಿ ಜಿಲ್ಲೆಯಲ್ಲಿ 76 ಸಾವಿರ ಮಕ್ಕಳಿದ್ದು, ಸ್ಕೌಟ್ಸ್ ಗೈಡ್ಸ್ 11 ಸಾವಿರ ಮಕ್ಕಳು ನೊಂದಣಿಯಾಗಿದ್ದಾರೆ. ಆದ್ದರಿಂದ ಈ ವರ್ಷ 22 ಸಾವಿರ ಮಕ್ಕಳು ನೋಂದಣಿ ಮಾಡಬೇಕಿದೆ ಎಂದರು.
ಪೋಷಕರಿಗೆ ಮತ್ತು ಮಕ್ಕಳಿಗೆ ಪ್ರೇರೇಪಣೆ ನೀಡಬೇಕೆಂದು ತಿಳಿಸಿದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಂಜಿತ್ ಅವರು ಸ್ವಾಗತಿಸಿದರು.