ಕೊನೆಗೂ ಸಂತ್ರಸ್ತರ ಮನೆಗಳ ಹಸ್ತಾಂತರಕ್ಕೆ ದಿನ ನಿಗದಿ

29/05/2020

ಮಡಿಕೇರಿ ಮೇ 29 : ಕೊನೆಗೂ ಮಳೆ ಹಾನಿ ಸಂತ್ರಸ್ತರಿಗೆ 463 ಮನೆಗಳ ಹಸ್ತಾಂತರಕ್ಕೆ ದಿನ ನಿಗದಿಯಾಗಿದೆ.ಜೂ. 4 ರಂದು ಬೆಳಗ್ಗೆ 11 ಗಂಟೆಗೆ ಜಂಬೂರು ಗ್ರಾಮದಲ್ಲಿ ಮತ್ತು 12.30 ಗಂಟೆಗೆ ಮದೆ ಗ್ರಾಮದಲ್ಲಿ ಸಂತ್ರಸ್ತರಿಗೆ ಮನೆ ಹಸ್ತಾಂತರ ಕಾಯ೯ಕ್ರಮ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮನೆಗಳನ್ನು ಹಸ್ತಾಂತರಿಸಲಿದ್ದಾರೆ. ಮುಖ್ಯಮಂತ್ರಿಗಳು ಪಾಲ್ಗೊಳ್ಳುವುದು ಖಾತ್ರಿಯಾಗಿಲ್ಲವೆಂದು ಜಿಲ್ಲಾಡಳಿತ ತಿಳಿಸಿದೆ.