ಷೇರುಮಾರುಕಟ್ಟೆಗೆ ಪತಂಜಲಿ ಪದಾರ್ಪಣೆ

May 29, 2020

ಮುಂಬೈ ಮೇ 28 : ಯೋಗ ಗುರು ಬಾಬಾ ರಾಮ್ ದೇವ್ ಅವರ ಆಯುರ್ವೇದಿಕ್ ಉತ್ಪನ್ನಗಳ ಸಂಸ್ಥೆ ಪತಂಜಲಿ ಇದೀಗ ಷೇರುಮಾರುಕಟ್ಟೆಗೂ ಪದಾರ್ಪಣೆ ಮಾಡಿದ್ದು, ಪತಂಜಲಿ ಸಂಸ್ಥೆ ಷೇರು ಬಿಡುಗಡೆ ಮಾಡಿದ ಕೇವಲ ಮೂರೇ ನಿಮಿಷದಲ್ಲಿ ಸಂಸ್ಥೆಯ ಷೇರುಮಾರಾಟ ಆರಂಭವಾಗಿದೆ.
ಹೌದು.. ಪತಂಜಲಿ ಸಂಸ್ಥೆ ಸುಮಾರು 250 ಕೋಟಿ ರೂ ಮೌಲ್ಯದ ಡಿಬೆಂಚರ್ಸ್ (ಷೇರು ಪತ್ರಗಳು)ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಷೇರುಪತ್ರ ಬಿಡುಗಡೆ ಮಾಡಿದ ಕೇವಲ ಮೂರೇ ನಿಮಿಷದಲ್ಲಿ ಸಂಸ್ಥೆಯ ಷೇರುಗಳ ಮಾರಾಟ ಕೂಡ ಆರಂಭವಾಗಿದೆ. ಹೂಡಿಕೆದಾರರು ಸಕಾರಾತ್ಮಕವಾಗಿ ಪತಂಜಲಿ ಸಂಸ್ಥೆಯ ಷೇರುಗಳನ್ನು ಸ್ವೀಕರಿಸಿದ್ದು, ಪತಂಜಲಿ ಸಂಸ್ಥೆಯ ಷೇರುಗಳಿಗೆ ಎಎ ರೇಟಿಂಗ್ ನೀಡಿದೆ.
ಇನ್ನು ಪತಂಜಲಿ ಸಂಸ್ಥೆ ತನ್ನ ಚೈನ್ ನೆಟ್ವರ್ಕ್ ಬಲಪಡಿಸುವ ಉದ್ದೇಶದಿಂದ ಬಂಡವಾಳ ಕ್ರೋಢೀಕರಣಕ್ಕೆ ಮುಂದಾಗಿದ್ದು ಇದೇ ಕಾರಣಕ್ಕೆ ಷೇರುಮಾರುಕಟ್ಟೆಗೆ ಷೇರುಪತ್ರಗಳ ಬಿಡುಗಡೆ ಮಾಡಿದೆ.
ಇದೇ ವಿಚಾರವಾಗಿ ಮಾತನಾಡಿರುವ ಸಂಸ್ಥೆಯ ವಕ್ತಾರ ಎಸ್ ಕೆ ತಿಜರವಾಲಾ ಅವರು ಕೊರೋನಾ ಸಾಂಕ್ರಾಮಿಕದಿಂದಾಗಿ ಆಯುರ್ವೇದ ಮೂಲದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಆಯುರ್ವೇದ ಉತ್ಪನ್ನಗಳು ಮಾನವನ ರೋಗ ನಿರೋಧಕಶಕ್ತಿ ಹೆಚ್ಚಿಸುತ್ತಿದೆ. ಹೀಗಾಗಿ ಪತಂಜಲಿ ಸಂಸ್ಥೆಯ ಉತ್ಪನ್ನಗಳ ಬೇಡಿಕೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

 

error: Content is protected !!