ತ್ವರಿತ ಪ್ಯಾನ್ ಕಾರ್ಡ್ ಸೇವೆ ಆರಂಭ

29/05/2020

ನವದೆಹಲಿ ಮೇ 28 : ಇನ್`ಸ್ಟಂಟ್ ಅಥವಾ ತ್ವರಿತ ಪ್ಯಾನ್ ಕಾರ್ಡ್ ವಿತರಣಾ ಸೇವೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಚಾಲನೆ ನೀಡಿದರು.
ಈ ಹಿಂದೆ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಕೇಂದ್ರ ಸರ್ಕಾರ ಇನ್`ಸ್ಟಂಟ್ ಅಥವಾ ತ್ವರಿತ ಪ್ಯಾನ್ ಕಾರ್ಡ್ ವಿತರಣಾ ಸೇವೆ ಆರಂಭಿಸಿದ್ದು, ಇ-ಕೆವೈಸಿ ಮೂಲಕ ಅರ್ಜಿದಾರರು ತ್ವರಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದಾಗಿದೆ. ಇಂತಹ ಇನ್`ಸ್ಟಂಟ್ ಪ್ಯಾನ್ ಕಾರ್ಡ್ ವಿತರಣಾ ಸೇವೆಗೆ ನಿರ್ಮಲಾ ಸೀತಾರಾಮನ್ ಅವರು ಇಂದು ದೆಹಲಿಯಲ್ಲಿ ಚಾಲನೆ ನೀಡಿದರು.
ಆಧಾರ್ ಕಾರ್ಡ್ ಮತ್ತು ಅದಕ್ಕೆ ನೊಂದಾಯಿತ ಮೊಬೈಲ್ ನಂಬರ್ ಅನ್ನು ನೊಂದಾಯಿಸುವ ಮೂಲಕ ಅರ್ಜಿದಾರರು ತ್ವರಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದಾಗಿದೆ. ಈ ಪ್ರಕ್ರಿಯೆ ಸಂಪೂರ್ಣ ಪೇಪರ್ ಲೆಸ್ (ಯಾವುದೇ ರೀತಿ ಕಾಗದ ರಹಿತ) ಆಗಿದ್ದು, ಇ-ಪ್ಯಾನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ಸಂಪೂರ್ಣ ಉಚಿತ ಎಂದು ಇಲಾಖೆ ಮಾಹಿತಿ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿತ್ತ ಸಚಿವಾಲಯ ಇ-ಪ್ಯಾನ್ ಸೇವೆ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಬಲ ನೀಡಲಿದೆ. ಇದರಿಂದ ತೆರಿಗೆ ಪಾವತಿದಾರರಿಗೆ ನೆರವಾಗಲಿದೆ.