ವೈರಸ್ ನಿಯಂತ್ರಣಕ್ಕಾಗಿ ನರಬಲಿ

29/05/2020

ಕಟಕ್ ಮೇ 28 : ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ನರಬಲಿ ಪ್ರಕರಣ ಸಂಬಂಧ 70 ವರ್ಷದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.
ದೇವಿಯನ್ನು ಸಮಾಧಾನಪಡಿಸಲು ಕಟಕ್ ಜಿಲ್ಲೆಯ ಬಂದಹಹುಡದಲ್ಲಿರುವ ದೇವಾಲಯದೊಳಗೆ ಅರ್ಚಕನೊಬ್ಬ 52 ವರ್ಷದ ವ್ಯಕ್ತಿಯನ್ನು ‘ತ್ಯಾಗ’ ಹೆಸರಲ್ಲಿ 52 ವರ್ಷದ ವ್ಯಕ್ತಿಯೋರ್ವನನ್ನು ಶಿರಚ್ಛೇದ ಮಾಡಿದ್ದಾರೆ.
ತ್ಯಾಗವು ಸಾಂಕ್ರಾಮಿಕ ರೋಗದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ನಂಬಿರುವ ಸಂಸಾರಿ ಓಜಾ (70) ದೇವಾಲಯದ ಆವರಣದಲ್ಲಿ ವ್ಯಕ್ತಿಯನ್ನು ಶಿರಚ್ಛೇದ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತನನ್ನು ಅದೇ ಗ್ರಾಮದ ಸರೋಜ್ ಪ್ರಧಾನ್ ಎಂದು ಗುರುತಿಸಲಾಗಿದೆ. ಅವರು ದೇವಾಲಯದ ಸಮೀಪವಿರುವ ತಮ್ಮ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅದರ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆತನ ಮನವೊಲಿಸಿ ದೇವಿಗೆ ಬಲಿ ನೀಡಿದ್ದಾನೆ ಎನ್ನಲಾಗಿದೆ.