ಹಾಂಕಾಂಗ್‍ನ ವಿಶೇಷ ವ್ಯಾಪಾರ ಸ್ಥಾನಮಾನ ಹಿಂದಕ್ಕೆ : ಮೈಕ್ ಪಾಂಪಿಯೋ ಘೋಷಣೆ

29/05/2020

ಬೀಜಿಂಗ್ : ಹಾಂಕಾಂಗ್‍ಗೆ ನೀಡಲಾಗಿರುವ ವಿಶೇಷ ವ್ಯಾಪಾರ ಸ್ಥಾನಮಾನವನ್ನು ಹಿಂದಕ್ಕೆ ಪಡೆದಿರುವುದಾಗಿ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.
ಹಾಂಕಾಂಗ್‍ಗೆ ಉನ್ನತ ಮಟ್ಟದ ಸ್ವಾಯತ್ತೆಯನ್ನು ನೀಡುವುದಾಗಿ ನಗರದ ಹಸ್ತಾಂತರದ ವೇಳೆ ಬ್ರಿಟನ್‍ಗೆ ನೀಡಿರುವ ಭರವಸೆಯನ್ನು ನೀನಾವು ಮುರಿದಿದೆ ಎಂದು ಅವರು ಹೇಳಿದ್ದಾರೆ.
ವಾಸ್ತಾವಿಕ ಸ್ಥಿತಿಗತಿಗಳನ್ನು ಪರಿಶೀಲಿಸಿದರೆ, ಚೀನಾವು ಹಾಂಕಾಂಗ್‍ಗೆ ಉನ್ನತ ಮಟ್ಟದ ಸ್ವಾಯತ್ತೆಯನ್ನು ನೀಡಿದೆ ಎನ್ನುವುದನ್ನು ಯಾವುದೇ ತಾರ್ಕಿಕ ವ್ಯಕ್ತಿ ಹೇಳಲಾರ ಎಂದರು.